ಮಂಗಳೂರು: 52 ಹರೆಯದಲ್ಲಿರುವ ತುಳುಕೂಟದ ಸಾರಥ್ಯವನ್ನು ನಾಲ್ಕು ದಶಕಗಳ ಕಾಲ ಶ್ರದ್ಧೆಯಿಂದ ನಿರ್ವಹಿಸಿ ಇದೀಗ ಅಲ್ಪ ದಿನದ ಅಸೌಖ್ಯದಿಂದ ತನ್ನ 76ನೇ ವರ್ಷದ ವಯಸ್ಸಿನಲ್ಲಿ ನಿಧನರಾದರು.
ಹೆಸರಾಂತ ಕಾದಂಬರಿಕಾರ, ಚಲನಚಿತ್ರ ನಿರ್ದೇಶಕರಾದ ವಿಶುಕುಮಾರ್ ಇವರ ಸಹೋದರರಾದ ದಾಮೋದರ ನಿಸರ್ಗ ಇವರು 11-08-1949ರಲ್ಲಿ ಮಂಗಳೂರು ಮರೋಳಿಯ ನಿಸರ್ಗ ಮನೆಯಲ್ಲಿ ಯಕ್ಷಗಾನ ಕ್ಷೇತ್ರದ ದಿಗ್ಗಜ ಶ್ರೀ ದೋಗ್ರ ಪೂಜಾರಿ ಮತ್ತು ಚಂದ್ರಾವತಿ ಇವರ ಮಗನಾಗಿ ಜನಿಸಿದರು. ಮಡದಿ ಹೇಮಾ ನಿಸರ್ಗ, ಮಗಳು ಡಾಕ್ಟರ್ ವಿನ್ಯಾಸ ನಿಸರ್ಗ, ಅಳಿಯ ಡಾಕ್ಟರ್ ವಿನಯ್ ಜತ್ತನ್ ಮತ್ತು ಮಗ ತ್ರಿದೇವ್ ನಿಸರ್ಗ ಇವರೊಂದಿಗೆ ಕೂಡು ಕುಟುಂಬದ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸಾಹಿತ್ಯ ಸಂಘಟನೆಯ ಪ್ರವೃತ್ತಿಯೊಂದಿಗೆ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದ ದಾಮೋದರ ನಿಸರ್ಗ ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೈಸರರಾಗಿ, ಗೋಕರ್ಣನಾಥ ಬ್ಯಾಂಕಿನ ಅಧ್ಯಕ್ಷರಾಗಿ, ಕಂಕನಾಡಿ ಗರಡಿಯ ಆಡಳಿತ ಮಂಡಳಿಯ ಸದಸ್ಯರಾಗಿ ,ಕಂಕನಾಡಿ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಕುಡ್ಲ ತುಳುಕೂಟದ ಅಧ್ಯಕ್ಷರಾಗಿ, ತುಳು ಒಕ್ಕೂಟದ ಕಾರ್ಯಾಧ್ಯಕ್ಷರಾಗಿ, ದೋಗ್ರ ಪೂಜಾರಿ ಯಕ್ಷಗಾನ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿ, ದೋಗ್ರ ಪೂಜಾರಿ ಯಕ್ಷಗಾನ ಪ್ರಶಸ್ತಿಯ ಸ್ಥಾಪಕರಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ, ತನ್ನನ್ನು ತೊಡಗಿಸಿ ಕೊಂಡವರು. ಎಷ್ಟೋ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದವರು.
ತುಳು ಒಕ್ಕೂಟದಲ್ಲಿ ಕೂಡಾ ಉಪಾಧ್ಯಕ್ಷರಾಗಿ ಮೊನ್ನೆ ಭಾನುವಾರದಂದು ಒಕ್ಕೂಟದ ಕಲಾವಂತ ಕಾರ್ಯಕ್ರಮದಲ್ಲಿ ದಿನ ಪೂರ್ತಿ ಭಾಗವಹಿಸಿದ್ದರು.
ಓರ್ವ ಉದ್ಯಮಿಯಾಗಿ, ತುಳು ಅಕಾಡೆಮಿಯ ಪುನರ್ ಸ್ಥಾಪಿಸಲು ಹೆಣಗಿದವರು. ವಿಶ್ವ ತುಳುವೆರೆ ಪರ್ಬದ ಪ್ರಮುಖ ರೂವಾರಿಯೂ ಆಗಿ ದುಡಿದು ನಿಸ್ವಾರ್ಥ ಸೇವೆಗೈದ ಸಜ್ಜನ, ಮೆಲು ಮಾತಿನ ದಾಮಣ್ಣ ತುಳುಕೂಟದ ಸುವರ್ಣ ಸಂಭ್ರಮದ ಆಚರಣೆಯ ರೂಪು- ರೇಷೆಗಳನ್ನು ಹೊಂದಿದ್ದರು. ಅವರ ವಿದಾಯತೆ ತುಳು ಭಾಷಿಗರಿಗೆ ತುಂಬಲಾರದ ನಷ್ಟ ಎಂದು ತುಳುಕೂಟದ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಸಂತಾಪ ಸೂಚಿಸಿದ್ದಾರೆ.
ಕೂಟದ ಉಪಾಧ್ಯಕ್ಷ ಜೆ.ವಿ. ಶೆಟ್ಟಿಯವರು ದಾಮಣ್ಣ ಗೋಕರ್ಣ ನಾಥೇಶ್ವರ ಬ್ಯಾಂಕ್ ನ ಅಧ್ಯಕ್ಷರಾಗಿ, ಕಂಕನಾಡಿ ಗರೋಡಿ ಕ್ಷೇತ್ರದ ಟ್ರಸ್ಟಿಗಳಾಗಿ, ಸೂರ್ಯನಾರಾಯಣ ದೇವಳದ ಮೊಕ್ತೇಸರರರಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ ಸಂಘ ಚಾಲಕರಾಗಿ ಸಮಾಜದ ಪ್ರತೀ ಕ್ಷೇತ್ರದಲ್ಲೂ ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದವರು ಎಂದರು.
ಪದ್ಮನಾಭ ಕೋಟ್ಯಾನ್ ರು ಮಾತನಾಡಿ, ನಿಸರ್ಗರು ಬಿಲ್ಲವ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದರು. ಅಲ್ಲದೇ, ದೋಗ್ರ ಪೂಜಾರಿ ಅಧ್ಯಯನ ಕೇಂದ್ರವನ್ನ ಸ್ಥಾಪಿಸಿ 45 ವರ್ಷ ಗಳಿಂದ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಾ, ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿ ಸುತ್ತಾ ಎಲ್ಲಾರಂಗದಲ್ಲೂ ಅನುಭವ ಪಡೆದವರು ಎಂದು ನಿಸರ್ಗರ ಗುಣಗಾನ ಮಾಡಿದರು.
ಕೋಶಾಧಿಕಾರಿ ಚಂದ್ರಶೇಖರ ಸುವರ್ಣ, ಜೊತೆ ಕಾರ್ಯದರ್ಶಿ ಪಿ.ಗೋಪಾಲ ಕೃಷ್ಣ, ಭಾಸ್ಕರ ಕುಲಾಲ್, ಬರ್ಕೆ, ರಮೇಶ್ ಕುಲಾಲ್, ಬಾಯಾರ್, ಸಂಜಾತಾ ಸುವರ್ಣ, ಕೊಡ್ಮಾಣ್, ಸತ್ಯವತಿ ಮೊದಲಾದವರು ನಿಸರ್ಗರ ನಿಧನಕ್ಕಾಗಿ ಕಂಬನಿ ಮಿಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق