ಮಂಗಳೂರು: ಸಾಮಾಜಿಕ ಕಾರ್ಯಕರ್ತ ಬಂಟ್ವಾಳ ನಿವಾಸಿ ಸದಾಶಿವ ಪ್ರಭು (55) ಅಲ್ಪ ಕಾಲದ ಅಸೌಖ್ಯದಿಂದ ಆ. 19ರಂದು ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ಧಾರೆ.
ಬಂಟ್ವಾಳ ಪೇಟೆಯಲ್ಲಿ ಸಣ್ಯ ವ್ಯಾಪಾರ, ಕ್ಯಾಂಟೀನ್ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು ಭೂ ವ್ಯವಹಾರ, ಸರಕಾರಿ ಇಲಾಖೆಗಳಲ್ಲಿ ಭೂ ಧಾಖಲೆಗಳ ಕೆಲಸಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಸಹಾಯಕರಾಗಿ ಕೆಲಸ ಮಾಡಿಕೊಡುತ್ತಿದ್ದರು. ಅಧಿಕಾರಿ ವರ್ಗದ ಜತೆ ನಿಕಟ ಸಂಪರ್ಕವಿದ್ದ ಕಾರಣ ಜಟಿಲ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಹಲವರಿಗೆ ನೆರವಾಗಿದ್ದರು.
ತನ್ನ ಶ್ರಮದ ದುಡಿಮೆಯಿಂದ ಸರಕಾರಿ ಆಸ್ಪತ್ರೆ, ಅಲ್ಲಿನ ವೈದ್ಯಕೀಯ ಸೌಲಭ್ಯಗಳಿಗೆ ನೆರವು ನೀಡಿದ್ದ ಅವರು ಕೋವಿಡ್ ಅಲೆಯ ಎರಡನೇ ಅವಧಿಯಲ್ಲಿ ನಿರ್ಗತಿಕರಿಗೆ ಆಹಾರ, ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅರ್ಹರಿಗೆ ನೆರವು ನೀಡುವಲ್ಲಿ ಸಕ್ರಿಯರಾಗಿ ತೊಡಗಿ ಕೊಂಡಿದ್ದರು.
ಬಂಟ್ವಾಳ ದೇವಳದ ಎಸ್.ವಿ.ಎಸ್. ಶಿಕ್ಷಣ ಸಂಸ್ಥೆಯ ಸದಸ್ಯರಾಗಿ ಹಲವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment