ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ ನಿಧನ

ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ ನಿಧನ

ಸುವರ್ಣ ನಿರ್ದೇಶನದ ಗುಡ್ಡದ ಭೂತ ಧಾರಾವಾಹಿ ಅಪಾರ ಜನಪ್ರಿಯತೆ ಪಡೆದಿತ್ತು





ಮಂಗಳೂರು: ಹಿರಿಯ ಚಿತ್ರ ನಿರ್ಮಾಪಕ, ನಿರ್ದೇಶಕ, ರಂಗಕರ್ಮಿ ಹಾಗೂ ಲೇಖಕರಾಗಿದ್ದ ಸದಾನಂದ ಸುವರ್ಣ ಅವರು ಇಂದು (ಜು.16) ಬೆಳಗ್ಗೆ 9:30ರ ಸುಮಾರಿಗೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.


ಘಟಶ್ರಾದ್ಧ ಚಿತ್ರದಿಂದ ತಮ್ಮ ಚೊಚ್ಚಲ ನಿರ್ಮಾಣದಲ್ಲೇ ಕನ್ನಡಕ್ಕೆ ಸ್ವರ್ಣಕಮಲ ತಂದು ಕೊಟ್ಟ ಖ್ಯಾತಿ ಅವರದ್ದು. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ 1932 ರಲ್ಲಿ ಹುಟ್ಟಿ, ಹೊಸ ಬದುಕನ್ನು ಅರಸಿ ಮುಂಬೈ ಸೇರಿದ ಅವರು ರಂಗನಟ, ನಿರ್ದೇಶಕ, ರಂಗಸಂಯೋಜಕ, ಚಲನಚಿತ್ರ, ಟಿವಿ, ಧಾರವಾಹಿ, ಸಾಕ್ಷ್ಯಚಿತ್ರಗಳ ನಿರ್ಮಾಣ, ನಿರ್ದೇಶನ, ಲೇಖಕ, ಪ್ರಕಾಶಕ ಇತ್ಯಾದಿ ಬಹುರೂಪಿ ಪಾತ್ರಗಳನ್ನು ಯಶಸ್ವಿಯಾಗಿ ಸಕಲ ಕನ್ನಡಿಗರು ಹೆಮ್ಮೆ ಪಡುವ ರೀತಿಯಲ್ಲಿ ನಿರ್ವಹಿಸಿ ಮುಂಬೈಯಲ್ಲಿ ಕನ್ನಡದ ಕಂಪನ್ನು ಪಸರಿಸಿದವರು..


ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಅವರ ನಿರ್ದೇಶನದ ಗುಡ್ಡದ ಭೂತ ಧಾರಾವಾಹಿ ಅಪಾರ ಜನಪ್ರಿಯತೆ ಗಳಿಸಿತ್ತು. 


ಸಿನಿಮಾ ಮಾತ್ರವಲ್ಲದೆ ಕನ್ನಡ ಮತ್ತು ತುಳು ರಂಗ ಭೂಮಿಯಲ್ಲಿ ನೂರಾರು ಅತ್ಯುತ್ತಮ ಯಶಸ್ವೀ ನಾಟಕಗಳನ್ನು ರಚಿಸಿ ಅವರು ನಿರ್ದೇಶಿಸಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಕುರಿತು ಸಾಕ್ಷ್ಯಚಿತ್ರವನ್ನು ಸದಾನಂದ ಸುವರ್ಣರು ನಿರ್ದೇಶಿಸಿದ್ದರು.


ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್, ಉರುಳು ಮುಂತಾದ ಜನಪ್ರಿಯ ನಾಟಕಗಳನ್ನು ರಚಿಸಿ ಜನಮೆಚ್ಚುಗೆ ಗಳಿಸಿದ್ದರು.


ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತಾವು ನೀಡಿದ ಅನನ್ಯ ಕೊಡುಗೆಗಳಿಂದಾಗಿ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತಿತರ ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಸದಾನಂದ ಸುವರ್ಣರಿಗೆ ಇದೇ ವರ್ಷ ಜನವರಿ ತಿಂಗಳಲ್ಲಿ 2023-24ನೇ ಸಾಲಿನ ಬಿ.ವಿ ಕಾರಂತ ಪ್ರಶಸ್ತಿ ನೀಡಿ ಅವರ ಜೀವಮಾನದ ಸಾಧನೆಯನ್ನು ಗೌರವಿಸಿದೆ.


ಮೂಲ್ಕಿ ಮೂಲದವರಾದ ಸದಾನಂದ ಸುವರ್ಣರು ಬಹಳ ವರ್ಷಗಳ ಕಾಲ ಮುಂಬಯಿಯಲ್ಲಿ ನೆಲೆಸಿದ್ದರು. ಹವ್ಯಾಸಿ ರಂಗಭೂಮಿಗೆ ಹೊಸ ಸ್ಪರ್ಶ ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಂಗಳೂರಿಗೆ ಬಂದು ನೆಲೆಸಿದ್ದರು.


ನಾಳೆ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಮಂಗಳೂರಿನ ಪುರಭವನದಲ್ಲಿ ಅವರ ದೇಹವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ  ಸಾರ್ವಜನಿಕ ಗೌರವಾರ್ಪಣೆಗೆ ಇಡಲಾಗುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 تعليقات

إرسال تعليق

Post a Comment (0)

أحدث أقدم