ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ನಿಧನ

ಸುಳ್ಯದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ನಿಧನ
ಮಂಗಳೂರು: ಸುಳ್ಯದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ಅವರು ಸೋಮವಾರ ವಿನೋಬ ನಗರದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. 1970ರ ದಶಕದಲ್ಲಿ ಕಾಸರಗೋಡಿನಿಂದ ಸುಳ್ಯಕ್ಕೆ ಬಂದ ಅವರು ಸುಳ್ಯದಲ್ಲಿ ಉದ್ಯಮಗಳನ್ನು ಪ್ರಾರಂಭಿಸಿದರು. ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಅವರು ಸುಳ್ಯದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಬೆಳವಣಿಗೆಗೆ ಬಹಳ ದೊಡ್ಡ ಕೊಡುಗೆಗಳನ್ನು ನೀಡಿದ್ದರು.


ಜಾಲ್ಸೂರು ಅಡ್ಕಾರಿನ ಗೇರುಬೀಜ ಫ್ಯಾಕ್ಟರಿ ಮಾಲೀಕರಾದ ಅವರು ಜಾಲ್ಸೂರು ಮಂಡಲ ಪಂಚಾಯತ್ ಪ್ರಧಾನರಾಗಿ ಸೇವೆ ಸಲ್ಲಿಸಿದ್ದರು. ಅವರು ಪತ್ನಿ ಪದ್ಮಾವತಿ ಕಾಮತ್, ಪುತ್ರ ಸುಧಾಕರ ಕಾಮತ್ ಹಾಗೂ ಸೊಸೆ, ಮೊಮ್ಮಕ್ಕಳು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


0 Comments

Post a Comment

Post a Comment (0)

Previous Post Next Post