ಮಂಗಳೂರು: ದಿವಂಗತ ಅಮ್ಮೆಂಬಳ ವೀರಪ್ಪ ಮಾಸ್ಟರ್ ಅವರ ಧರ್ಮಪತ್ನಿ ವಸಂತಿ ವಿ. (76) ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಗುರುವಾರ (ಏಪ್ರಿಲ್ 18) ರಂದು ಅಮ್ಮೆಂಬಳದ ತಂಬಾಜೆ ಸ್ವಗೃಹದಲ್ಲಿ ನಿಧನರಾದರು.
ಅವರು ಮಂಜೇಶ್ವರ ದಿ.ದೂಮಪ್ಪ ಮಾಸ್ಟರ್ ಮತ್ತು ದಿ. ದೇವಕಿ ಅವರ ತೃತೀಯ ಪುತ್ರಿ.
ಅವರು ಮಕ್ಕಳಾದ ವೀಣಾ, ಪ್ರವೀಣ ಅಮ್ಮೆಂಬಳ, ನವೀನ್ ಅಮ್ಮೆಂಬಳ ಮತ್ತು ಡಾ. ರಶ್ಮಿ ಅಮ್ಮೆಂಬಳ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಮೃತರ ಉತ್ತರ ಕ್ರಿಯೆಯು ಎಪ್ರಿಲ್ 30ರಂದು ಮಂಗಳವಾರ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಜರುಗಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment