ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ನಿಂದ ಆರಂಭವಾದ ಹೊಸ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜಿಯನ್ ನ ಉದ್ಘಾಟನೆ ಹಾಗೂ ಹೊಸ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಫೆ.24ರ ಸಂಜೆ 5.30 ರಿಂದ ಪುತ್ತೂರಿನ ಆಶ್ಮಿ ಕಂಫರ್ಟ್ ಬೈಪಾಸ್ ಸೆಂಟರ್ ನಲ್ಲಿ ನಡೆಯಿತು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ನ ಅಧ್ಯಕ್ಷರಾದ Snr PPF ನಾರಾಯಣ ಎನ್ ಬಲ್ಯ ಕೊಲ್ಲಿಮಾರು ಅಧ್ಯಕ್ಷತೆ ವಹಿಸಿದ್ದರು.
ಹೊಸ ಪುತ್ತೂರು ಲೀಜಿಯನ್ ನ್ನು ದೀಪ ಬೆಳಗಿಸುವ ಮುಖೇನ ಪೂರ್ವ ರಾಷ್ಟೀಯ ಅಧ್ಯಕ್ಷರಾದ Snr Csl PPF Dr ಅರವಿಂದ್ ರಾವ್ ಕೇದಿಗೆ ಉದ್ಘಾಟಿಸಿದರು. ಪುತ್ತೂರು SCI ಯ ನೂತನ ಸದಸ್ಯರಿಗೆ ರಾಷ್ಟೀಯ ಉಪಾಧ್ಯಕ್ಷರಾದ Snr PPF ಜಿ ಕೆ ಹರಿಪ್ರಸಾದ್ ರೈ ಪ್ರಮಾಣ ವಚನ ಬೋಧಿಸಿದರು. ನೂತನ ಸ್ಥಾಪಕ ಅಧ್ಯಕ್ಷರಾದ Snr ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ ಅವರಿಗೆ ನೆಲ್ಯಾಡಿ SCI ಅಧ್ಯಕ್ಷರಾದ Snr PPF ನಾರಾಯಣ N ಬಲ್ಯ ಅಧ್ಯಕ್ಷೀಯ ಪ್ರಮಾಣ ವಚನ ನೀಡಿದರು. ಪುತ್ತೂರು SCI ನ ನೂತನ ಪದಾಧಿಕಾರಿಗಳಿಗೆ ಅಧ್ಯಕ್ಷರಾದ ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ ಪ್ರಮಾಣ ವಚನ ನೀಡಿದರು.
ನೂತನ ಪುತ್ತೂರು ಲೀಜಿಯನ್ ನ ಸ್ಥಾಪಕ ಕಾರ್ಯದರ್ಶಿಯಾಗಿ Snr ಎಂ.ಪಿ ರೋಹಿಣಿ ಆಚಾರ್ಯ ಹಾಗೂ ಸ್ಥಾಪಕ ಕೋಶಾಧಿಕಾರಿಯಾಗಿ Snr ಸುಮಂಗಲಾ ಶೆಣೈ ಪ್ರಮಾಣ ವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರಾದ ಅನ್ನಪೂರ್ಣಿಮಾ ಆರ್ ರೈ, ವೀಣಾ ಬಿಕೆ, ಆಶಾಲತ ಎ ಕೆ, ಮಹಾಲಿಂಗ ನಾಯ್ಕ, ಪ್ರಹ್ಲಾದ್, ಉಷಾ ನಾಗೇಶ್, ಹರಿಣಾಕ್ಷಿ ಜೆ ಶೆಟ್ಟಿ ನೆಲ್ಲಿ ಕಟ್ಟೆ, ಶಾರದಾ ಪ್ರಭು, ರಾಜೀವಿ ಸ್ಥಾಪಕ ಪದಾಧಿಕಾರಿಗಳಾಗಿ, ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿ Rtn ಸಂತೋಷ ಶೆಟ್ಟಿ ಛೇರ್ಮನ್ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ರಾಷ್ಟೀಯ ಉಪಾಧ್ಯಕ್ಷರಾದ Snr PPF ಜಿ ಕೆ ಹರಿಪ್ರಸಾದ್ ರೈ, ಅತಿಥಿಗಳಾದ ರಾಷ್ಟೀಯ ಸಮುದಾಯ ಅಭಿವೃದ್ಧಿ ವಿಭಾಗದ ಸಯೋಜಕರಾದ Snr PPF Dr ಸದಾನಂದ ಕುಂದರ್, ನೆಲ್ಯಾಡಿ SCIಯ ಸ್ಥಾಪಕ ಅಧ್ಯಕ್ಷರಾದ Snr ಅಬ್ರಹಾಂ ವರ್ಗಿಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹೊಸ ಲೀಜಿಯನ್ ಉದ್ಘಾಟಕರು ಪೂರ್ವ ರಾಷ್ಟೀಯ ಅಧ್ಯಕ್ಷರಾದ Snr Csl PPF Dr ಅರವಿಂದ ರಾವ್ ಕೆದಿಗೆ ಮಾತನಾಡಿ, ಪುತ್ತೂರು ಲೀಜಿಯನ್ ರಾಷ್ಟೀಯ ಮಟ್ಟದಲ್ಲಿ 2023-24 ರಲ್ಲಿ ಹೊಸದಾಗಿ ರಚನೆಗೊಂಡ 24 ನೇ ಲೀಜಿಯನ್ ಆಗಿದ್ದು 24ನೇ ತಾರೀಕಿನಂದು ಉದ್ಘಾಟನೆಗೊಂಡಿದೆ ಎಂದು ಹೇಳಿದರು. ನೂತನವಾಗಿ ರಚನೆಗೊಂಡ ಪುತ್ತೂರು SCI ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸದಸ್ಯರಿಗೆ ಪಿನ್, ಕಾಲರ್, SCI ಪುತ್ತೂರು ಸ್ಥಾಪನೆ ಗೊಂಡ ದಿನಾಂಕ ಮುದ್ರಿತ ರಾಷ್ಟೀಯ ಅಧಿಕೃತ ಪತ್ರವನ್ನು ಹಾಗೂ ರಾಷ್ಟೀಯ ಮಟ್ಟದ ಪರಿಕರಗಳನ್ನು ಪುತ್ತೂರು ಲೀಜಿಯನ್ ಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
SCI ಪುತ್ತೂರು ನೂತನ ಲೀಜಿಯನ್ ಪದಗ್ರಹಣ ಆದ ಬಳಿಕದ ಸಭಾ ಅಧ್ಯಕ್ಷತೆಯನ್ನು ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ ವಹಿಸಿಕೊಂಡು ಆರಂಭಿಕ ಮಾತನ್ನಾಡಿ ಎಲ್ಲರ ಸಹಕಾರವನ್ನು ಯಾಚಿಸಿದರು. ವೇದಿಕೆಗೆ ಅತಿಥಿಗಳನ್ನು SCI ನೆಲ್ಯಾಡಿ ಲೀಜಿಯನ್ ನ ಸ್ಥಾಪಕ ಸದಸ್ಯರಾದ Snr ರವೀಂದ್ರ ಟಿ ಬರಮಾಡಿಕೊಂಡರು.
SCI ಪುತ್ತೂರು ಲೀಜಿಯನ್ ನ ಸ್ಥಾಪಕ ಸದಸ್ಯರಾದ Snr ರಾಜೀವಿಯವರು ಪ್ರಾರ್ಥಿಸಿ, SCI ನೆಲ್ಯಾಡಿಯ IPP Snr PPF R ವೆಂಕಟ್ರಮಣ ಸೀನಿಯರ್ ವಾಣಿ ವಾಚಿಸಿದರು. SCI ನೆಲ್ಯಾಡಿ ಲೀಜಿಯನ್ ಸೀನಿಯರೇಟ್ ವಿಭಾಗದ ಅಧ್ಯಕ್ಷರಾದ Snrt ಪುಷ್ಪಾ ನಾರಾಯಣ ಬಲ್ಯ ರವರು ನೂತನ ಅಧ್ಯಕ್ಷರಾದ Snr ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ ಅವರನ್ನು ಪರಿಚಯಿಸಿದರು. SCI ನೆಲ್ಯಾಡಿಯ ವಿವಿಧ ಪದಾಧಿಕಾರಿಗಳು Snr ವಿಶ್ವನಾಥ ಶೆಟ್ಟಿ K, Snr ಪ್ರಶಾಂತ್ ಸಿ.ಎಚ್., Snr PPF ಪ್ರಕಾಶ್ ಕೆ.ವೈ, Snr ಮೋಹನ್ ಕುಮಾರ್ D, Snr ಶೀನಪ್ಪ S, Snr V R ಹೆಗ್ಡೆ, Snr ಚಂದ್ರಶೇಖರ ಬಾನಜಾಲು, Snr ದಯಾನಂದ ಕೆ, ಆದರ್ಶ ಇವರೆಲ್ಲ ಉದ್ಘಾಟಕರು, ಪದಗ್ರಹಣ ಅಧಿಕಾರಿ, ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರ ಹೆಸರು ಹಾಕಿ ಲಕ್ಕಿ ಡ್ರಾವನ್ನು SCI ಪುತ್ತೂರುನವರು ಮಾಡಿ ವಿಜೇತರಾಗಿ SCI ನೆಲ್ಯಾಡಿ ಲೀಜಿಯನ್ ನ ಸ್ಥಾಪಕ ಅಧ್ಯಕ್ಷರಾದ Snr PPF ಅಬ್ರಹಾಂ ವರ್ಗಿಸ್ ಮೂಡಿ ಬಂದರು. ಕಾರ್ಯಕ್ರಮದಲ್ಲಿ SCI ನೆಲ್ಯಾಡಿಯ ಸ್ಥಾಪಕಾಧ್ಯಕ್ಷರು SCI ಪುತ್ತೂರಿನ ಸ್ಥಾಪಕಧ್ಯಕ್ಷರಿಗೆ ಶಾಲು ಹಾಕಿ ಗೌರವಿಸಿದರು. ಕಾರ್ಯಕ್ರಮದಲ್ಲಿ SCI ರಾಷ್ಟೀಯ ಅಧಿಕಾರಿಯಾದ Snr PPF ಕಿಶೋರ್ ಫೆರ್ನಾಂಡಿಸ್, ಪುತ್ತೂರು ವಿವಿಧ ರೋಟರಿ ಕ್ಲಬ್ ನ ಸದಸ್ಯರು, ಜೇಸಿ ಸದಸ್ಯರು ಊರಿನ ಹಿರಿಯರು SCI ನೆಲ್ಯಾಡಿಯ Snrt ಸರೋಜ ಮೇಡಂ ಹಾಗೂ ಪುತ್ತೂರು SCI ಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಅತಿಥಿಗಳಿಗೆ SCI ಪುತ್ತೂರು ಲೀಜಿಯನ್ ನ ಸ್ಥಾಪಕ ಅಧ್ಯಕ್ಷರಾದ ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ ರವರು ಸ್ಮರಣಿಕೆ ನೀಡಿ ಗೌರವಿಸಿದರು. ಸಭಾ ಆರಂಭದ ಅಧ್ಯಕ್ಷ Snr PPF ನಾರಾಯಣ N ಬಲ್ಯ ಕೊಲ್ಲಿಮಾರು ಸ್ವಾಗತಿಸಿ, SCI ಪುತ್ತೂರಿನ ಸ್ಥಾಪಕ ಕಾರ್ಯದರ್ಶಿ Snr ಎಂ ಪಿ ರೋಹಿಣಿ ಆಚಾರ್ಯ ಧನ್ಯವಾದ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲರಿಗೂ ಚಾ ತಿಂಡಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರಗೀತೆಯೊಂದಿಗೆ ಪದಗ್ರಹಣ ಕಾರ್ಯಕ್ರಮ ಸಂಪನ್ನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment