ಉಡುಪಿ: ತುಳುನಾಡಿನ ಪ್ರಾಚೀನ ಇತಿಹಾಸಕ್ಕೆ ಅದರಲ್ಲೂ ನೂರಾರು ದೇವಸ್ಥಾನಗಳ ಪ್ರಾಚೀನ ಇತಿಹಾಸಕ್ಕೆ ಅತ್ಯಂತ ಶ್ರಮಪೂರ್ವಕ ಸಂಶೋಧನೆಯ ಬೆಳಕುಚೆಲ್ಲಿ ಮಹಾನ್ ಕೃತಿಯ ಮೂಲಕ ದಾಖಲಿಸಿ ಮಹದುಪಕಾರ ಮಾಡಿದ ಮಹಾ ಸಂಶೋಧಕ ಕೀರ್ತಿಶೇಷ ಡಾ ಪಾದೂರು ಗುರುರಾಜ ಭಟ್ಟರ ಧರ್ಮಪತ್ನಿ ಪಾರ್ವತಮ್ಕನವರು (91 ವರ್ಷ) ನಿನ್ನೆ ಶನಿವಾರ ರಾತ್ರಿ ಉಡುಪಿ ದೊಡ್ಣಗುಡ್ಡೆಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು 4 ಪುತ್ರರು 2 ಪುತ್ರಿಯರನ್ನು ಅಗಲಿದ್ದಾರೆ. ಅತ್ಯಂತ ದೈವಶ್ರದ್ಧೆ ಸಾತ್ವಿಕ ಮನೋಭಾವದ ವರಾಗಿದ್ದ ಪಾರ್ವತಮ್ಮನವರು ಅನೇಕ ದೇವಳಗಳ ಜೀರ್ಣೋದ್ಧಾರವೂ ಸೇರಿದಂತೆ ನೂರಾರು ಧಾರ್ಮಿಕ ಕೆಲಸಗಳು ಕರಂಬಳ್ಳಿ ವೇಂಕಟರಮಣ ದೇವಸ್ಥಾನದ ನವೀಕರಣ ಕಾರ್ಯ, ಕರಂಬಳ್ಳಿ ಬ್ರಾಹ್ಮಣ ಸಂಘದ ಪ್ರತೀ ಹಂತದಲ್ಲೂ ಮಹತ್ವದ ಮಾರ್ಗದರ್ಶನ, ಹಾಗೂ ಆರ್ಥಿಕ ನೆರವು ನೀಡಿದ್ದರು. ಪಾದೂರು ಗುರುರಾಜ ಭಟ್ಟ ಪ್ರತಿಷ್ಠಾನದ ವಿಶ್ವಸ್ಥರೂ ಆಗಿದ್ದರು. ಅವರ ಆತ್ಮಕ್ಕೆ ಮಾಜಿ ಶಾಸಕ ಕೆ ರಘುಪತಿ ಭಟ್, ವೇಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment