ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜನಸಂಘದ ಹಿರಿಯ ನಾಯಕ ದಿನೇಶ್ ಗೊಲ್ಲರಕೇರಿ ನಿಧನ

ಜನಸಂಘದ ಹಿರಿಯ ನಾಯಕ ದಿನೇಶ್ ಗೊಲ್ಲರಕೇರಿ ನಿಧನ


ಮಂಗಳೂರು: ಭಾರತೀಯ ಜನಸಂಘದ ಹಿರಿಯ ನಾಯಕರಾಗಿದ್ದ ನ್ಯಾಯವಾದಿ ದಿನೇಶ್ ಗೊಲ್ಲರಕೇರಿ (87) ಅವರು ಆಗಸ್ಟ್ 9ರಂದು ಕಾವೂರಿನ ಸ್ವಗೃಹದಲ್ಲಿ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.


ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಘವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದ ಹಿರಿಯ ಸಂಘ ಪರಿವಾರದ ಮುಂಚೂಣಿಯ ನಾಯಕನಾಗಿದ್ದ ಗೊಲ್ಲರಕೇರಿ ಅವರು ಉಳ್ಳಾಲ ವಿಧಾನಸಭಾ ಚುನಾವಣೆಯಲ್ಲಿ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.


ಅವರು ಕದ್ರಿಯ ಸ್ವಗೃಹದಲ್ಲಿ ದೀರ್ಘ ಕಾಲ ವಾಸ್ತವ್ಯ ಮಾಡಿದ್ದು ಮಂಗಳೂರು ಮುನ್ಸಿಪಾಲಿಟಿ ಚುನಾವಣೆಯಲ್ಲಿ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿ ಜನತಾ ಪಕ್ಷದ ಸಕ್ರಿಯ ನಾಯಕರಾಗಿದ್ದರು. ಮುಂದೆ ಬಿ.ಜೆ.ಪಿ ಯಲ್ಲೂ ಪಕ್ಷವನ್ನು ಮುನ್ನಡೆಸಿದ್ದರು.


ಸಿ.ಜಿ. ಕಾಮತ್, ಕರಂಬಳ್ಳಿ ಸಂಜೀವ ಶೆಟ್ಟಿ, ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ, ಸಂಜೀವ ಶೆಟ್ಟಿ ಬಿಜೈ, ಸಂಜೀವ ಸೋಮೇಶ್ವರ್, ರುಕ್ಮಯ್ಯ ಶೆಟ್ಟಿ ಕದ್ರಿ, ನಾರಾಯಣ ಶೆಟ್ಟಿ, ಜಯರಾಮ ಶೆಟ್ಟಿ ಮೊದಲಾದ ನಾಯಕರ ಒಡನಾಡಿಯಾಗಿದ್ದರು.


ಕದ್ರಿ ಕಂಬಳ ಸಮಿತಿಯಲ್ಲಿ ಸುಮಾರು ಮೂರು ದಶಕಗಳ ಕಾಲ ಕಾರ್ಯದರ್ಶಿಯಾಗಿ, ಚಿತ್ರಾಪುರ್ ಸಾರಸ್ವತ್ ಮಠ ಸಮಿತಿಯಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರಿ, ಒಬ್ಬ ಪುತ್ರ ನನ್ನು ಅಗಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

0 Comments

Post a Comment

Post a Comment (0)

Previous Post Next Post