ಮಂಗಳೂರು: ಕರ್ಣಾಟಕ ಬ್ಯಾಂಕ್‍ನ ನಿವೃತ್ತ ಅಧ್ಯಕ್ಷ ಹಾಗೂ ಸಿಇಒ, ಸಹೃದಯಿ ಕಲಾಪೋಷಕ, ದಕ್ಷ ಆಡಳಿತಗಾರ, ಪಿ. ಜಯರಾಮ ಭಟ್ (71 ವರ್ಷ) ಇಂದು ದೈವಾಧೀನರಾದರು.
ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ, ಕಲೆ, ಸಾಹಿತ್ಯ, ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ಸಂಸ್ಥೆಗಳಿಗೆ ನಿರಂತರವಾಗಿ ನೆರವು ನೀಡುತ್ತಿದ್ದ ಸರಳ ಸಜ್ಜನಿಕೆಯ ಜಯರಾಮ ಭಟ್ಟರ ನಿಧನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ತುಂಬಿ ಬಾರದ ನಷ್ಟವಾಗಿದೆ. ಈ ಭಾಗದ ಯಕ್ಷಗಾನ ಸಂಘಟನೆಗಳಿಗೆ ಬ್ಯಾಂಕಿನ ಮೂಲಕ ಅವರು ನೀಡಿದ ಆರ್ಥಿಕ ಬೆಂಬಲ ಅವಿಸ್ಮರಣೀಯ. ಅವರಿಂದ ಉಪಕೃತರಾದವರಲ್ಲಿ ನಾವು, ನಮ್ಮ ಸಂಸ್ಥೆ ಸೇರಿದೆ. ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಪೊಳಲಿ ಜಯರಾಮ ಭಟ್ಟರ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ ಎಂದು 'ಯಕ್ಷಾಂಗಣ'ದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق