ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಕಾಲ ಅಗಲಿದ ಸಂಘ ಜೀವಿ ಕೇಶವ ಹೆಗಡೆ

ಅಕಾಲ ಅಗಲಿದ ಸಂಘ ಜೀವಿ ಕೇಶವ ಹೆಗಡೆ


ಉಡುಪಿ: ಜೀವನ ಪರ್ಯಂತ ಸಂಘದ ವಿಚಾರ, ಸಿದ್ಧಾಂತಗಳನ್ನೇ ಉಸಿರಾಡಿದ್ದ, ವಿಹಿಂಪ‌ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆಯವರು ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರೆಂಬ ಆಘಾತಕಾರಿ ವರ್ತಮಾನ ಬರಸಿಡಿಲಿನಂತೆ ಬಂದಿದೆ‌.


ವಿಶ್ವಹಿಂದು ಪರಿಷತ್ ಮೂಲಕ ಕರ್ನಾಟಕ ತೆಲಂಗಾಣ ಆಂಧ್ರ ಮೊದಲಾದ ಕಡೆಗಳಲ್ಲಿ ಅನೇಕ ಹಿಂದು ಜನಜಾಗೃತಿ ಆಂದೋಲನ, ಉಡುಪಿಯಲ್ಲಿ ನಡರದ ವಿರಾಟ್ ಸಮಾಜೋತ್ಸವ ಧರ್ಮಸಂಸತ್ ಅಲ್ಲದೇ ವಿವಿಧ ಸಂದರ್ಭಗಳಲ್ಲಿ ವಿವಿಧೆಡೆ ನಡೆದ  ಗೋರಕ್ಷಾ ಚಳವಳಿ ಮತಾಂತರ ವಿರೋಧಿ ಹೋರಾಟ, ಅಸ್ಪೃಶ್ಯತಾ ವಿರೋಧಿ ಕಾರ್ಯಕ್ರಮಗಳಲ್ಲಿ ಅತ್ಯಂತ ಸಕ್ರಿಯವಾಗಿ ಯಾವ ಆಡಂಬರಗಳೂ ಇಲ್ಲದೇ ನಿಸ್ಪೃಹರಾಗಿ ದುಡಿದ ನಮ್ರ ನೇತಾರ ಕೇಶವ ಹೆಗಡೆಯವರು. ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು.

ಪೂಜ್ಯ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಶವ ಹೆಗಡೆಯವರ ನಿಧನದ ವಾರ್ತೆ ತಿಳಿದು ಆಘಾತ ವ್ಯಕ್ತಪಡಿಸಿದ್ದು, ಶ್ರೀ ಮಠದೊಂದಿಗೆ ಅವರಿಗಿದ್ದ ಆತ್ಮೀಯ ಬಾಂಧವ್ಯ ಹಿಂದುತ್ವಕ್ಕಾಗಿ ಅವರು ಸಲ್ಲಿಸಿದ್ದ ನಿಸ್ವಾರ್ಥ ಸೇವೆಗಳನ್ನು ಸ್ಮರಿಸಿಕೊಂಡು ಅವರ ಆತ್ಮಕ್ಕೆ ಸದ್ಗತಿಯನ್ನು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    

0 تعليقات

إرسال تعليق

Post a Comment (0)

أحدث أقدم