ಮುಡಿಪು: ಜಾತಿ, ಮತ, ಭಾಷೆಗಳ ನಡುವೆ ಕಲ್ಪಿತ ಭಯಗಳನ್ನು ಹುಟ್ಟಿಸಿ ಸಮಾಜವನ್ನು ಒಡೆಯುವ ಕಾರ್ಯ ರಾಜಕೀಯ ಲಾಭಕ್ಕಾಗಿ ನಡೆಯುತ್ತಿರುವುದು ವರ್ತಮಾನದ ಆತಂಕಕಾರಿ ವಿಷಯ. ಯಾರೋ ಮಾಡಿದ ತಪ್ಪಿಗೆ ಸಮುದಾಯವನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಒಳ್ಳೆಯದಲ್ಲ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ, ಹಾವೇರಿ ಇಲ್ಲಿನ ವಿಶ್ರಾಂತ ಕುಲಪತಿ ಪ್ರೊ ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟರು.
ಅವರು ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆದ ಉಳ್ಳಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು.
ಸಾಮರಸ್ಯದ ಬದುಕು ನಮ್ಮೆಲ್ಲರ ಹಂಬಲ, ಆಶಯ. ಕನ್ನಡ ಸಾಹಿತ್ಯ ಪರಂಪರೆ ಸಾಮರಸ್ಯದ ಬದುಕನ್ನೇ ಪ್ರತಿಪಾದಿಸುತ್ತಾ ಬಂದರೆ ಸಾಹಿತ್ಯದ ಓದು ನಮ್ಮನ್ನು ಪಾಮರತ್ವದೆಡೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಇನ್ಫೋಸಿಸ್ ನ ಕಾರ್ಪೋರೇಟ್ ಅಫೇರ್ಸ್ ಮುಖ್ಯಸ್ಥ ಸಂತೋಷ್ ಅನಂತಪುರ ಮಾತನಾಡಿ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಹೊರತಾದ ಕೃಷಿ, ಲಲಿತಕಲೆ ಸಂಬಂಧೀ ಚರ್ಚೆಗಳನ್ನು ಒಳಗೊಂಡು ಅದರ ವ್ಯಾಪ್ತಿಯನ್ನು ಹೆಚ್ಚಿಸಬೇಕಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇರಾ ನೇಮು ಪೂಜಾರಿ, ಇಬ್ರಾಹಿಂ ಕೊಡಿಜಾಲು, ರವೀಂದ್ರ ಶೆಟ್ಟಿ ಉಳಿದೊಟ್ಟು, ಡಾ ಸಾಯಿಗೀತಾ, ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ, ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ, ಪತ್ರಕರ್ತ ಪುಷ್ಪರಾಜ್ ಬಿ ಯನ್, ಮಾಯಿಲ ಕುತ್ತಾರ್ ಇವರನ್ನು ಸಾಮಾಜಿಕ ಮುಖಂಡ ಟಿ ಜಿ ರಾಜಾರಾಂ ಭಟ್ ಅವರು ಸನ್ಮಾನಿಸಿದರು.
ಮಂಗಳೂರು ವಿವಿ ಕುಲಸಚಿನ ಪ್ರೊ ಕಿಶೋರ್ ಕುಮಾರ್ ಸಿ ಕೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ ಪಿ ಶ್ರೀನಾಥ್, ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ, ಕೇಂದ್ರ ಕಸಾಪ ಸದಸ್ಯ ಮಾಧವ ಎಂ ಕೆ, ಮಂಜುನಾಥ್ ರೇವಣ್ಕರ್, ಮಿಥುನ್ ಉಡುಪ, ಲಯನ್ ಚಂದ್ರಹಾಸ ಶೆಟ್ಟಿ, ಎಡ್ವರ್ಡ್ ಲೋಬೋ, ರವೀಂದ್ರ ರೈ ಕಲ್ಲಿಮಾರು ಉಪಸ್ಥಿತರಿದ್ದರು.
ಉಳ್ಳಾಲ ಕಸಾಪ ಅಧ್ಯಕ್ಷ ಡಾ ಧನಂಜಯ ಕುಂಬ್ಳೆ ಸ್ವಾಗತಿಸಿದರು. ಉಳ್ಳಾಲ ಹೋಬಳಿ ಅಧ್ಯಕ್ಷೆ ವಿಜಯಲಕ್ಷ್ಮಿ ರೈ ಕಲ್ಲಿಮಾರು ವಂದಿಸಿದರು. ತ್ಯಾಗಂ ಹರೇಕಳ ನಿರೂಪಿಸಿದರು.
ಮಾನವೀಯತೆಯನ್ನು ಮೀರಿದ ಧರ್ಮ ಬೇರೆ ಇಲ್ಲ: ಶ್ಯಾಮಲಾ ಮಾಧವ್
ಸಾಹಿತ್ಯದಿಂದ ನಮ್ಮ ಮನಸ್ಸು ಅರಳಬೇಕು. ನಮ್ಮ ಅರಿವಿನ ಸೀಮೆ ನಿರಂತರವಾಗಿ ವಿಸ್ತರಿಸುತ್ತಾ ಹೋಗಬೇಕು. ಸಾಹಿತ್ಯ ಸಾಮರಸ್ಯದ ದೀವಿಗೆಯಾಗಬೇಕು. ನಮ್ಮ ನಾಡು ಎಂದಿಗೂ ಸೌಹಾರ್ದ ಸಾಮರಸ್ಯವನ್ನು ಕಳೆದುಕೊಳ್ಳದಿರಲಿ. ಮಾನವೀಯತೆ ತನ್ನು ಮೀರಿದ ಧರ್ಮ ಬೇರೆ ಇಲ್ಲ. ಇದನ್ನಷ್ಟೇ ನಾವು ನಮ್ಮ ಎಳೆಯರಿಗೆ ಕಲಿಸೋಣ ಎಂದು ಉಳ್ಳಾಲ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಶ್ಯಾಮಾಲಾ ಮಾಧವ್ ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment