ಸುಳ್ಯ: ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು -2023 ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ , ಸಂಘಟಕ , ಸಾಹಿತಿ ಮತ್ತು ಚಿತ್ರನಿರ್ದೇಶಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರಿನ ನವೀನಾಂಜಲಿ ಫೇಸ್ ಬುಕ್ ಲೈವ್ ಕಾರ್ಯಕ್ರಮ ಸಂಯೋಜಕ ಮತ್ತು ಗಾಯಕರಾದ ನವೀನ ಪುತ್ತೂರು ರವರು ಕಾರ್ಯಕ್ರಮ ಉದ್ಘಾಟಿಸಿದರು.
ಖ್ಯಾತ ಗಾಯಕ ಚಂದ್ರಶೇಖರ್ ಹೆಗ್ಡೆ ಪುತ್ತೂರು ಮತ್ತು ಗಾಯಕ ಪದ್ಮರಾಜ್ ಬಿ ಸಿ ಚಾರ್ವಾಕ ರವರು ಸ್ಪರ್ಧೆಯ ತೀರ್ಪುಗಾರರಾಗಿ ಸೇವಾ ಸಲ್ಲಿಸಿದರು.
ಸಭಾ ಕಾರ್ಯಕ್ರಮದಲ್ಲಿ ಪದ್ಮರಾಜ್ ಬಿ ಸಿ ಚಾರ್ವಾಕ ರಿಗೆ 2023 ನೇ ಸಾಲಿನ ಸಂಗೀತ ಕಲಾನಿಧಿ ಪ್ರಶಸ್ತಿ ಮತ್ತು ಚಂದ್ರಶೇಖರ್ ಹೆಗ್ಡೆ ಅವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಸಂತ್ ಬಾರಡ್ಕ ಉಪಸ್ಥಿತರಿದ್ದರು . ಇದೇ ಸಂದರ್ಭದಲ್ಲಿ ಗಾಯಕ ಮತ್ತು ಸಾಹಿತಿಯಾದ ಭೀಮರಾವ್ ವಾಷ್ಠರ್ ರವರ ಗಾಯನದ ಹೇ ನಿಂಬು ಹಣ್ಣಾಸರ್ಕ್ಲಿ ಪೋರ್ಗಿ ಎಂಬ ಮರಾಠಿ ಚಿತ್ರಗೀತೆಯನ್ನು ಬಿಡುಗಡೆ ಮಾಡಲಾಯಿತು.
ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಪ್ರಾರ್ಥಿಸಿದರು. ವಿವಿಧ ಊರುಗಳಿಂದ ಆಗಮಿಸಿದ್ದ ಗಾಯಕರಾದ ಪುಷ್ಪಾವತಿ ಎಡಮಂಗಲ , ನಿತ್ಯಾ ಬೆಂಗಳೂರು , ಗಣೇಶ್ ಗಣಿ , ಸನತ್ ಬೆಳ್ಳಾರೆ , ಯಶ್ವಿಕ ಕುಂಟಿನಿ , ವಿ
ಮಹೇಶ್ ಮಂಜೇಶ್ವರ , ಅವನಿ ಎಮ್ ಎಸ್ ಸುಳ್ಯ , ಅಶ್ವಿಜ್ ಆತ್ರೇಯ ಸುಳ್ಯ , ಪೂಜಾಶ್ರೀ ಬಳ್ಳಡ್ಕ , ದಿಶಾ ಸುಳ್ಯ, ಅಶ್ಮಿತ್ ಎ ಜೆ ಮಂಗಳೂರು , ಸುರೇಶ ಕುಮಾರ್ ಜಿ ಚಾರ್ವಾಕ , ಮನ್ವಿತ್ ಬಳ್ಳಡ್ಕ , ವೈಷ್ಣವಿ ಎಂ ಆರ್ ಪುತ್ತೂರು , ಸ್ನಿಗ್ಧ ಕೃಷ್ಣ ಕುರುಮುಜ್ಜಿ , ಪ್ರವೀಣ್ ಡಿ ದೇವ , ಸುಜಿತ್ ಗುತ್ತಿಗಾರು ಸವಿತಾ ಸಂತೋಷ್ , ಚಂದನ್ ಸುಳ್ಯ , ಕೃಷ್ಣವೇಣಿ , ಧನುಷಾ ತೊಡಿಕಾನ , ಅನಘ ಎಂ ಅಳಿಕೆ , ಭಾಗ್ಯಶ್ರೀ ದೊಡ್ಡತೋಟ , ಪ್ರಣವಿ ಕನಕಮಜಲು , ಜಯಶ್ರೀ ಕಡಬ , ಸವಿತಾ ಬಾಳಿಲ , ಸಂದೀಪ್ ಸುಳ್ಯ , ತನ್ವಿ ಎಸ್ ಬಜ್ಪೆ , ಎಸ್ ಎ ಅಣ್ಣು ಮತ್ತು ಶೀಲಾ ಸುರೇಶ ಬಜಪೆ ರವರು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಎಲ್ಲಾ ಗಾಯಕರಿಗೆ ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು .
ಫೈನಲ್ ಸ್ಪರ್ಧೆಗೆ ಬಂದ 5 ಜನ ಗಾಯಕರಿಗೆ ಮಾರ್ಚ್ 5 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ ಫೈನಲ್ ಸ್ಪರ್ಧೆ ಆಯೋಜಿಸಿ ವಿನ್ನರ್ ರನ್ನರ್ ಮತ್ತು ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತದೆ .
Post a Comment