ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಆಯೋಜಿಸಿದ್ದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಫಲಿತಾಂಶ

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಆಯೋಜಿಸಿದ್ದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಫಲಿತಾಂಶ

 


ಸುಳ್ಯ:  ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಸುಳ್ಯದ  ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಖ್ಯಾತ ಗಾಯಕ ಕರುನಾಡ ಗಾನಗಂಧರ್ವ ಬಿರುದು ಪಡೆದಿರುವ  ಮಿಥುನ್ ರಾಜ್ ವಿದ್ಯಾಪುರ ಅವರು ತೀರ್ಪುಗಾರರಾಗಿದ್ದರು . 

 ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ಅಧ್ಯಕ್ಷತೆ ವಹಿಸಿದ್ದರು . ಶಾಂತಾ ಕುಂಟಿನಿ ಅವರು ಮುಖ್ಯ ಅತಿಥಿಗಳಾಗಿದ್ದರು . ತೀರ್ಪುಗಾರರಾದ ಮಿಥುನ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಸಹ ತೀರ್ಪುಗಾರರಾಗಿ  ಗಾಯಕ ಪದ್ಮರಾಜ್ ಚಾರ್ವಾಕ ಸಹಕರಿಸಿದರು. ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಸ್ವಾಗತಿಸಿದರು . ಸುಮಂಗಲ ಕೋಳಿವಾಡ ರವರು ನಿರೂಪಿಸಿದರು.  ಸಂಗೀತ ಸ್ಪರ್ಧೆಯ ಫಲಿತಾಂಶ ಹೀಗಿದೆ . ವಿನ್ನರ್ ಆಗಿ ವಾಷ್ಠರ್ ಸ್ಟಾರ್ ಸಿಂಗರ್ ಎಂಬ ಬಿರುದನ್ನೂ  ಕೂಡ ಮಹೇಶ್ ಮಂಜೇಶ್ವರ್ ಅವರು ಬಹುಮಾನ ಪಡೆದರು  ರನ್ನರ್ ಬಹುಮಾನವನ್ನು ಇಬ್ಬರು ಪಡೆದರು . ಕು ಎಲ್ವಿಶಾ ಮತ್ತು ಅಶ್ವಿಜ್ ಆತ್ರೇಯ ರವರು ವಾಷ್ಠರ್ ಬೆಸ್ಟ್ ಸಿಂಗರ್ ಬಿರುದಿನ  ಜೊತೆ ರನ್ನರ್ ಬಹುಮಾನ ಪಡೆದರು. ಭಾಗ್ಯಶ್ರೀ ದೊಡ್ಡತೋಟ ಮತ್ತು ಅಶ್ಮಿತ್ ಎ ಜೆ ಮಂಗಳೂರು ಅವರು ಪ್ರೋತ್ಸಾಹಕ ಬಹುಮಾನ ಪಡೆದರು . ಪೂರ್ಣಿಮಾ ತೋಟಪ್ಪಾಡಿ ಅವರು ವಂದಿಸಿದರು .

0 Comments

Post a Comment

Post a Comment (0)

Previous Post Next Post