ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚುನಾವಣಾ ಕರ್ತವ್ಯಕ್ಕೆ ಸಿದ್ದರಾಗಿ: ಡಾ. ಚೂಂತಾರು

ಚುನಾವಣಾ ಕರ್ತವ್ಯಕ್ಕೆ ಸಿದ್ದರಾಗಿ: ಡಾ. ಚೂಂತಾರು

ಉಳ್ಳಾಲ ಘಟಕದ ಗೃಹರಕ್ಷಕರ ಚುನಾವಣಾ ಪೂರ್ವ ಸಿದ್ಧತಾ ಸಭೆ


ಉಳ್ಳಾಲ: ಮುಂದಿನ ಮೇ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರನ್ನು ನೇಮಿಸಬೇಕಾಗಿರುವುದರಿಂದ ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಮತ್ತು ಪೌರ ರಕ್ಷಣಾ ಪಡೆಯ ಮುಖ್ಯಪಾಲಕರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಉಳ್ಳಾಲ ಗೃಹರಕ್ಷಕದಳ ಘಟಕಕ್ಕೆ ಇಂದು (ಮಾ.01) ಭೇಟಿ ನೀಡಿದರು.


ಎಲ್ಲಾ ಗೃಹರಕ್ಷಕರು ತಮ್ಮ ಸದಸ್ಯತ್ವ ನವೀಕರಣಗೊಳಿಸಿ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ಚುನಾವಣೆಗೆ ತಯಾರಾಗುವಂತೆ ಸೂಚನೆ ನೀಡಿದರು. ಪದೇ ಪದೇ ಕಾರಣವಿಲ್ಲದೆ ವಾರದ ಕವಾಯತಿಗೆ ಗೈರುಹಾಜರಾಗುವ ಮತ್ತು ಬಂದೋಬಸ್ತ್ ಕರ್ತವ್ಯಗಳಿಗೆ ಬಾರದೇ ಇರುವ ಗೃಹರಕ್ಷಕರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಘಟಕಾಧಿಕಾರಿಗೆ ಸೂಚನೆ ನೀಡಿದರು.


ಅದೇ ರೀತಿ ಹಲವಾರು ತಿಂಗಳುಗಳಿಂದ ಯಾವುದೇ ಕರ್ತವ್ಯ, ಕವಾಯತು, ಬಂದೋಬಸ್ತ್‌ಗಳಿಗೆ ಬರದ ನಿಷ್ಕ್ರಿಯ ಗೃಹರಕ್ಷಕರನ್ನು ಸಮಾಲೋಪನೆಗೊಳಿಸಲು ಘಟಕಾಧಿಕಾರಿಗೆ ಆದೇಶ ನೀಡಿದರು. ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಗೆ ಎಲ್ಲಾ ಗೃಹರಕ್ಷಕರು ನೊಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್ ಎಂ, ಹಾಗೂ ಹಿರಿಯ ಗೃಹರಕ್ಷಕರಾದ ಸುನಿಲ್, ಬಶೀರ್, ಸವೇರಾ, ಖಾಲಿದ್, ಹಮೀದ್, ದಿವ್ಯಾ, ಪುಷ್ಪಲತಾ ಮುಂತಾದವರು ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



0 Comments

Post a Comment

Post a Comment (0)

Previous Post Next Post