ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರು; ಕಂಬಳ ಗದ್ದೆಯಲ್ಲಿ ಯುವತಿಯರ ಪೋಟೋ ತೆಗೆಯುತ್ತಿದ್ದ ಯುವಕ

ಪುತ್ತೂರು; ಕಂಬಳ ಗದ್ದೆಯಲ್ಲಿ ಯುವತಿಯರ ಪೋಟೋ ತೆಗೆಯುತ್ತಿದ್ದ ಯುವಕ

 


ಪುತ್ತೂರಿನ ಕೋಟಿ ಚೆನ್ನಯ ಕಂಬಳ ಗದ್ದೆ ಪರಿಸರದಲ್ಲಿ ಯುವಕನೊಬ್ಬ ಯುವತಿಯ ಫೋಟೋ ತೆಗೆಯುತ್ತಿದ್ದ ವಿಚಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನನ್ನು ಪೊಲೀಸರಿಗೊಪ್ಪಿಸಿದರು. ವಿಚಾರಣೆಯ ವೇಳೆಯಲ್ಲಿ ಆತನ ಮೊಬೈಲ್‌ನಲ್ಲಿ ಅನೇಕ ಯುವತಿಯರ ಪೊಟೋ ಇರುವುದು ಬೆಳಕಿಗೆ ಬಂದಿದೆ.


ಕುರಿಯ ಮೂಲದ ಯುವಕ ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು ಈತ ಕಂಬಳದ ಪರಿಸರದಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದನು. 


ಈ ವೇಳೆ ಓರ್ವ ಯುವತಿ ಇದನ್ನು ಗಮನಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಳು. ಕಾರ್ಯಕರ್ತರು ಯುವಕನನ್ನು ಠಾಣೆಗೆ ಕರೆದೊಯ್ದಿದ್ದು, ಯುವಕನ ಮೊಬೈಲ್‌ ಪರಿಶೀಲನೆ ನಡೆಸಿದಾಗ ಇನ್ನು ಹಲವು ಯುವತಿಯರ ಫೋಟೋಗಳು ಇರುವುದು ಬೆಳಕಿಗೆ ಬಂದಿದೆ.


ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ, ಯುವಕನಿಗೆ ಎಚ್ಚರಿಕೆ ನೀಡಿದ್ದಾರೆ. 

0 Comments

Post a Comment

Post a Comment (0)

Previous Post Next Post