ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಭಿಮತ: ರಾಜಕೀಯ ಸಂಶೋಧನಾ ಅಧ್ಯಯನಕ್ಕೆ ಯೇೂಗ್ಯವಾದ ಕ್ಷೇತ್ರ ಕುಂದಾಪುರ

ಅಭಿಮತ: ರಾಜಕೀಯ ಸಂಶೋಧನಾ ಅಧ್ಯಯನಕ್ಕೆ ಯೇೂಗ್ಯವಾದ ಕ್ಷೇತ್ರ ಕುಂದಾಪುರ


ರಾಜಕೀಯ ಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಶೋಧನಾ ವಿಷಯವಾಗಿ ಆಯ್ಕೆ ಮಾಡಿಕೊಳ್ಳಬಹುದಾದ ದೇಶದ ಅಥವಾ ರಾಜ್ಯದ ಏಕೈಕ ಕ್ಷೇತ್ರವೆಂದರೆ ಅದು ಕುಂದಾಪುರ. ಈ ಕುರಿತಾಗಿ ಒಂದು ಸಂಶೋಧನಾ ಪ್ರಸ್ತಾವನೆಯನ್ನು ಅಧ್ಯಯನ ಶೀಲ ವಿದ್ಯಾರ್ಥಿಗಳ ಮಾಹಿತಿಗಾಗಿ ತೆರೆದಿಡುತ್ತಿದ್ದೇನೆ.


1. ಕುಂದಾಪುರ ವಿಧಾನ ಸಭಾಕ್ಷೇತ್ರಕ್ಕೆ ಇಡೀ ಕನಾ೯ಟಕದಲ್ಲಿಯೇ ಒಂದು ವಿಶೇಷವಾದ ವೈಶಿಷ್ಟ್ಯವಾದ ಗುಣ ಲಕ್ಷಣಗಳಿವೆ. ಮೊದಲಿನಿಂದ ಇಂದಿನ ತನಕ ಈ ಕ್ಷೇತ್ರ ಪ್ರತಿನಿಧಿಸಿದ ಶಾಸಕರಗಳು ತಮ್ಮ ಸರಳ ಸಜ್ಜನಿಕೆಯ ಮೂಲಕವೇ ಪಕ್ಷಕ್ಕೆ ಘನತೆ ಗೌರವ ತಂದು ಕೊಟ್ಟ ಹೆಗ್ಗಳಿಕೆಗೆ ಇದೆ. ತಮ್ಮ ಕ್ಷೇತ್ರದಲ್ಲಿ ಪಕ್ಷವನ್ನು ಮೀರಿ ನಿಂತ ವ್ಯಕ್ತಿತ್ವ ಇದ್ದರೂ ಸಹ ಎಂದು ಕೂಡಾ ತಮ್ಮಗೊಂದು ಮಂತ್ರಿಗಿರಿ ಬೇಕೆನ್ನುವ ಬೇಡಿಕೆ ಮುಂದಿಟ್ಟವರಲ್ಲ. (ಆಸೆ ತೇೂರಿಸಿ ಮತ್ತೆ ಕೈ ಕೊಟ್ಟಾಗ ಮನಸ್ಸು ನೇೂವಿಸಿ ಕೊಂಡ ಒಂದು ಉದಾಹರಣೆ ಇರ ಬಹುದು ಹೊರತು ತಾವಾಗಿಯೇ ಬೇಡಿಕೆ ಮುಂದಿಟ್ಟವರಲ್ಲ) ಅದು ಸುದೀರ್ಘ ಕಾಲ ಶಾಸಕರಾಗಿದ್ದ ಪ್ರತಾಪಚಂದ್ರ ಶೆಟ್ಟಿಯವರು ಇರ ಬಹುದು; ಇವರ ಹಳೆಯ ರೆಕಾರ್ಡ್ ಮುರಿದು ನಿಂತಿರುವ ಹಾಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಇರಬಹುದು.


2. ಈ ಎಲ್ಲಾ ಹಿನ್ನೆಲೆಯಲ್ಲಿ ಕುಂದಾಪುರದ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಆಳವಾಗಿ ನೇೂಡಿದಾಗ ಇಂತಹ ರಾಜಕೀಯ ವ್ಯವಸ್ಥೆ ಈ ದೇಶದಲ್ಲಿ ಕಾಣಲು ಸಾಧ್ಯವೇ? ಅನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ರಾಜಕೀಯವೆಂದರೆ ಸಾಕಪ್ಪಾ ಪ್ರತಿನಿತ್ಯ ಸಭೆ ಸಮಾರಂಭ ಹಾರ ತುರಾಯಿ ಹೊಗಳು ಭಟರ ಸಾಲು ಸಾಲು ಉತ್ಸವಗಳ ಮೇಳ ಪ್ರತಿಮೆಗಳ ಅನಾವರಣ. ಅಡಿಗಲ್ಲು ಶಂಕು ಸ್ಥಾಪನೆ ಒಂದಿಷ್ಟು ಅಬ್ಬರದ ಪುಕ್ಕಟೆಯ ಪ್ರಚಾರ. ಇದಿಷ್ಟು ದೇಶ ವ್ಯಾಪಿಯಾಗಿ ದಿನನಿತ್ಯ ನೇೂಡುವ ರಾಜಕೀಯ ಮೇಲಾಟ ಡೊಂಬರಾಟ.


3.ಈಗ ಕುಂದಾಪುರಕ್ಕೆ ಬನ್ನಿ ಶಂಕು ಸ್ಥಾಪನೆ ಇಲ್ಲ ಉದ್ಘಾಟನೆ ಇಲ್ಲ. ಮಂತ್ರಿ ಮಾಗಧರ ಕಾಲು ಧೂಳಿನ ಸ್ಪಶ೯ವಿಲ್ಲ. ರಾಜಕೀಯ ಮೇಲಾಟವಿಲ್ಲ. ಮಾತ್ರವಲ್ಲ ಕುಂದಾಪುರ ಕ್ಷೇತ್ರದಲ್ಲಿ ಮೂತಿ೯ ಪೂಜಕರು ಇಲ್ಲ ಜಾತಿ ಆರಾಧಕರು ಇಲ್ಲ ಧಮ೯ ಭಜಕರು ಇಲ್ಲ. ಈ ಜಾತ್ಯತೀತ ನೆಲದಲ್ಲಿ ಈಗಿನ ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆ ಅಂದರೆ ಇಲ್ಲಿ ರಾಜಕೀಯ ಪಕ್ಷಗಳು ಜೀವಂತವಾಗಿದಿವೊ ಇಲ್ಲವೊ ಅನ್ನುವ ಮಟ್ಟಿಗೆ ಪ್ರಶಾಂತ ಮನ ಸ್ಥಿತಿ.


4. ಈಗ ಚುನಾವಣಾ ಕಾಲ ನೇೂಡಿ; ಪ್ರಚಾರದ ಕಾವು ಏರುವ ಕಾಲ; ಮನೆ ಮನೆಗೆ ಹೇೂಗಿ ಪಕ್ಷಗಳ ಧ್ವಜ ಊರುವ ಕಾಲ. ಆದರೆ ನಮ್ಮ ಕುಂದಾಪುರದಲ್ಲಿ ಆಡಳಿತ ಪಕ್ಷಕ್ಕೂ ಧ್ವಜ ಊರುವ ಅಗತ್ಯವಿಲ್ಲ. ವಿಪಕ್ಷದವರಿಗೂ ಕುಾಡ ಅಷ್ಟೇ ಈ ಧ್ವಜ ಊರಿದರೆ ಏನಾದರು ಪ್ರಯೇೂಜನ ಸಿಗಬಹುದಾ ಎಂದು ನೂರು ಬಾರಿ ಆಲೇೂಚಿಸ ಬೇಕಾದ ಪರಿಸ್ಥಿತಿ.ಹಾಗಾಗಿಯೇ ಕುಂದಾಪುರದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಇಲ್ಲ. ಬದಲಾಗಿ ರಾಜಕೀಯ ಪ್ರಬುದ್ಧತೆ ಇದೆ.


5. ಸವ೯ ಪಕ್ಷಗಳ ಕಡೆಯಿಂದ ಟಿಕೇಟಿಗಾಗಿ ಪೈಪೇೂಟಿಯೂ ಇಲ್ಲ.ಸವ೯ ಪಕ್ಷಗಳ ಲೇೂ ಕಮಾಂಡ್ ಹೈ ಕಮಾಂಡುಗಳು ರಾಜ್ಯದ 224 ಕ್ಷೇತ್ರಗಳಲ್ಲಿ ಕುಂದಾಪುರ ಒಂದನ್ನು ಮಾತ್ರ ಬಿಟ್ಟು ನಮ್ಮ ಮುಂದಿನ ಅಭ್ಯರ್ಥಿಗಳು ಯಾರಾಗಬಹುದು? ಅನ್ನುವ ಕುರಿತಾಗಿ ಹಗಲು ರಾತ್ರಿ ತಲೆ ಕೆಡಿಸಿ ಕೊಳ್ಳುತ್ತಿರುವುದು.


6. ರಾಜಕೀಯದಲ್ಲಿ ಚುನಾವಣೆ ಅಂದರೆ ಒಂದಿಷ್ಟು ಗೌಜಿ ಗಮ್ಜಲ್ ಇದನ್ನೇ ಬದುಕೆಂದು ತಿಳಿದು ಕೊಂಡು ಬದುಕುವರಿಗೆ ಕುಂದಾಪುರದ ಪರಿಸ್ಥಿತಿ ಸ್ವಲ್ಪ ಬೇಸರ ತರ ಬಹುದು. ಆದರೆ ರಾಜಕೀಯ ಅಂದರೆ ಹೇಸಿ ರೇೂಸಿ ಹೋದವರಿಗೆ ಕುಂದಾಪುರದ ರಾಜಕೀಯ ಒಂದಿಷ್ಟು ಸುಖ ಶಾಂತಿ ನೆಮ್ಮದಿ ನೀಡುವ ಪ್ರಜಾಪ್ರಭುತ್ವದ ತಾಣವುಾ ಹೌದು.


7. ಈ ಎಲ್ಲಾ ಹಿನ್ನೆಲೆಯಲ್ಲಿ ಕುಂದಾಪುರದ ರಾಜಕೀಯ ವಿಶೇಷತೆಯ ಕುರಿತಾಗಿ ಸಂಶೋಧನಾ ಅಧ್ಯಯನ ನಡೆಸಲು ಉತ್ತಮ ತಾಣವೂ ಹೌದು.


ತೀರ್ಮಾನ:

1. ಇಂದಿನ ರಾಜ್ಯ /ರಾಷ್ಟ್ರ ರಾಜಕೀಯ ಪರಿಸ್ಥಿತಿಯಲ್ಲಿ ಕುಂದಾಪುರದ ಪ್ರಬುದ್ಧ ರಾಜಕಾರಣಕ್ಕೆ ಬೆಲೆ ಸಿಗಬಹುದೇ? ಉಡುಪಿ ಜಿಲ್ಲೆಯ ಪ್ರಸ್ತುತ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಮಂತ್ರಿ ಪದವಿ ಸಿಗದೇ ವಂಚಿತರಾದ ಕ್ಷೇತ್ರಗಳೆಂದರೆ ಕುಂದಾಪುರ ಬೈಂದೂರು ಮಾತ್ರ ಅನ್ನುವ ಮಾತು ಕೂಡಾ ಇದೆ. ಅಂದರೆ ಕುಂದಾಪುರದವರ ಒಳ್ಳೆಯತನವೇ ಅವರಿಗೆ ಮುಳುವಾಗಿದೆಯಾ?


2. ಸರ್ಕಾರದ ಖಚಿ೯ನಲ್ಲಿಯೇ ನಡೆಯುವ ಉದ್ಯೋಗ ಮೇಳವಾಗಲಿ; ವೈದ್ಯಕೀಯ ಶಿಕ್ಷಣ ಸಂಸ್ಥೆಗಳಾಗಲಿ, ಜಿಲ್ಲಾ ಮಟ್ಟದ ಉತ್ಸವಗಳು ಕುಂದಾಪುರದ ಕಡೆಗೆ ಸ್ವಲ್ಪವೂ ಮುಖ ಮಾಡಲಿಲ್ಲವೇಕೆ? ಅನ್ನುವ ಕೂಗು ಕುಂದಾಪುರದ ಕಡೆಯಿಂದಲೂ ಕೇಳಿ ಬಂದಿತ್ತು. ಇದು ನಮ್ಮ ರಾಜಕೀಯ ಪಕ್ಷಗಳು ಮಾಡುವ ಉತ್ಸವಗಳಲ್ಲ. ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಗಳು ಗಮನ ಹರಿಸಿ ಮಾಡ ಬೇಕಾದ ಕಾರ್ಯಕ್ರಮ. ಇವರು ಯಾಕೆ ಕುಂದಾಪುರವನ್ನು ಮರೆತರು? ಇಂತಹ ಮಲತಾಯಿ ಧೇೂರಣೆ ಮುಂದೆ ಪ್ರತ್ಯೇಕ ಜಿಲ್ಲೆಯ ಬೇಡಿಕೆಗೆ ಕಾರಣವಾಗಬಹುದಾ? ಅನ್ನುವ ಪ್ರಶ್ನೆ ಸಹಜವಾಗಿ ಕಾಡುತ್ತದೆ.


ಒಟ್ಟಿನಲ್ಲಿ ಕುಂದಾಪುರ ರಾಜಕೀಯದ ಹುಟ್ಟು ಬೆಳವಣಿಗೆ ಇಂದಿನ ರಾಜಕೀಯ ಸ್ಥಿತಿ ಗತಿ ಅಧ್ಯಯನ ಶೀಲರಿಗೆ ಕುತೂಹಲಕಾರಿ ಕ್ಷೇತ್ರ ಅನ್ನುವುದಂತೂ ಸತ್ಯ


- ವಿಶ್ಲೇಷಣೆ: ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post