ಸುಳ್ಯ ತಾಲೂಕಿನ ಐವರ್ನಾಡು ಗ್ರಾಮ ಪಂಚಾಯತ್ ಸಮಗ್ರ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ ದಿನಾಂಕ 13.2.23 ರಂದು ಗ್ರಾಮ ಪಂಚಾಯತ್ ಸಭಾಭವನ ದಲ್ಲಿ ನಡೆಯಿತು.
ಸಂಜೀವಿನಿ ಯೋಜನೆ ಮೂಲಕ ಸರ್ಕಾರದಿಂದ ಸಿಗುವ ಸವಲತ್ತು ಗಳ ಬಗ್ಗೆ ಹಾಗೂ
ಕೃಷಿ ಪೌಷ್ಟಿಕ ಕೈತೋಟದ ಕಾಮಗಾರಿ ಹೆಚ್ಚು ಮಾಡಬೇಕೆಂದು ಪ್ರತಿ ಸದಸ್ಯರಲ್ಲಿ ತಿಳಿಸಿ ಹೇಳಿದರು. ಕೃಷಿಯೇತರ ಚಟುವಟಿಕೆ ಕುರಿತು NRLM ಬ್ಲಾಕ್ ಮ್ಯಾನೇಜರ್ ಶ್ರೀ ಬಸಪ್ಪ ಕಡ್ಲಿಮಟ್ಟಿ ಅವರು ಉತ್ಪನ್ನ ಗಳನ್ನೂ ಹೆಚ್ಚು ಮನೆಯಲ್ಲಿಯೇ ತಯಾರು ಮಾಡಿ ಮಾರುಕಟ್ಟೆ ಗಾಗಿ ಬೆಳ್ಳಾರೆ ಮಾಸಿಕ ಸಂತೆಯ ಪ್ರಯೋಜನ ಪಡೆಯಬಹುದೆಂದು ಮಾಹಿತಿ ನೀಡಿದರು.
ಹಾಗೆಯೇ ಆಹಾರ ಉತ್ಪನ್ನ ಮಾಡುವವರಿಗೆ ಪೂರಕ ದಾಖಲೆ ಹೊಂದಿಸಿಕೊಟ್ಟಲ್ಲಿ fssai ಪ್ರಮಾಣ ಪತ್ರ ಮಾಡಿಸಿ ಕೊಡುವುದಾಗಿ ಇತರ ಉದ್ಯಮ ದಾರರಿಗೆ MSME ಪ್ರಮಾಣ ಪತ್ರ UNDP ಸಂಸ್ಥೆ ಅವರಿಂದ ಮಾಡಿಸಿಕೊಡುವದಾಗಿ ಮಾಹಿತಿ ನೀಡಲಾಯಿತು. ಹಾಗೂ ಉನ್ನತಿ ಯೋಜನೆ , ಕೌಶಲ್ಯ ತರಬೇತಿ ಪ್ರಯೋಜನ , ಹೊಸ ಸಂಘ ಗಳ ರಚನೆ , ಸ್ತ್ರೀ ಸಾಮರ್ಥ್ಯ ವ್ಯವಹಾರ ಯೋಜನೆ ಬ್ಯಾಂಕ್ ಲಿಂಕೇಜ್ ನಿಂದಾ ಸಿಗುವ ಪ್ರಯೋಜನ ಮತ್ತು ಗುಂಪು ಚಟುವಟಿಕೆ ಗೆ ಹೆಚ್ಚಿನ ಒತ್ತು ಕೊಡಬೇಕೆಂದು ವಲಯ ಮೆಲ್ವಿಚಾರಕಿ ಮೇರಿಯವರು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಪಿಡಿಒ, ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ mbk..lcrp ಗಳು ,ಸಖಿಯರು, ಹಾಗೂ ಒಕ್ಕೂಟದ ಸದಸ್ಯೆಯರು ಉಪಸ್ಥಿತರಿದ್ದರು .
Post a Comment