ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಫೆ.18 - ಭಕ್ತಿಗೀತೆ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹಾಡಲು ಗಾಯಕರಿಗೆ ಅವಕಾಶ

ಫೆ.18 - ಭಕ್ತಿಗೀತೆ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹಾಡಲು ಗಾಯಕರಿಗೆ ಅವಕಾಶ

 


ಸುಳ್ಯ : ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ದಿನಾಂಕ 18-2-2023  ರಂದು ಶನಿವಾರ ಮಹಾ ಶಿವರಾತ್ರಿಯ ದಿನ ಶಿವರಾತ್ರಿ ಗಾನವೈಭವ ಕಾರ್ಯಕ್ರಮವು ಸುಳ್ಯದ ಪ್ರಜಾಪಿತ  ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ಯಾನ ಮಂದಿರದಲ್ಲಿ ಮಧ್ಯಾಹ್ನ 2  ಗಂಟೆಗೆ ಭಕ್ತಿಗೀತೆ ಗಾನ ವೈಭವ ನಡೆಯಲಿದೆ. 


ಭಕ್ತಿಯ ಹಾಡು ಹಾಡಲು ಆಸಕ್ತ ಇರುವ ಹಿರಿಯ ಮತ್ತು ಕಿರಿಯ ಗಾಯಕರು ತಮ್ಮ ಹೆಸರನ್ನು 9845309239 ಈ ಸಂಖ್ಯೆಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. 


ಕೇವಲ 20 ಜನರಿಗೆ ಮಾತ್ರ ಅವಕಾಶ . ಭಾಗವಹಿಸುವ ಎಲ್ಲಾ  ಗಾಯಕರಿಗೆ ಚೆಂದದ  ಪ್ರಮಾಣ ಪತ್ರ ನೀಡಿ ಗೌರವಿಸಲಾಗುವದು.


 ಕಡ್ಡಾಯವಾಗಿ ಭಕ್ತಿಗೀತೆಗಳನ್ನು ಮಾತ್ರ ಹಾಡಬೇಕು .ಸಿನೆಮಾದ ಭಕ್ತಿಗೀತೆಯೂ ಆಗಬಹುದು . ಕರೋಕೆ ಸಂಗೀತದ ಜೊತೆ ಅಥವಾ ಸಂಗೀತ ಇಲ್ಲದೆಯೂ ಹಾಡಬಹುದು.


ಆಸಕ್ತ ಗಾಯಕರು ಬೇಗ ಹೆಸರು ನೊಂದಾಯಿಸಿಕೊಳ್ಳಿ ಎಂದು ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ , ಸಾಹಿತಿ ಹಾಗೂ ಜ್ಯೋತಿಷಿಯಾದ ಎಚ್ . ಭೀಮರಾವ್ ವಾಷ್ಠರ್ ರವರು ತಿಳಿಸಿದ್ದಾರೆ.

0 Comments

Post a Comment

Post a Comment (0)

Previous Post Next Post