ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಣ ದ್ವಿಗುಣ ವಂಚನೆ: ದ.ಕ ಮೂಲದ ವ್ಯಕ್ತಿಗೆ ಭದ್ರಾವತಿಯಲ್ಲಿ ಬಿತ್ತು ಟೋಪಿ

ಹಣ ದ್ವಿಗುಣ ವಂಚನೆ: ದ.ಕ ಮೂಲದ ವ್ಯಕ್ತಿಗೆ ಭದ್ರಾವತಿಯಲ್ಲಿ ಬಿತ್ತು ಟೋಪಿ


ಭದ್ರಾವತಿ: ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರು. ವಂಚನೆ ಮಾಡಿರುವ ಘಟನೆ ಕಳೆದ 2 ದಿನಗಳ ಹಿಂದೆ ತಾಲೂಕಿನ ಭದ್ರಾ ಜಲಾಶಯದ ಬಳಿ ನಡೆದಿರುವುದು ಬೆಳಕಿಗೆ ಬಂದಿದೆ.


ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 25 ವರ್ಷ ವಯಸ್ಸಿನ ನಿತೀಶ್ ಪಂಡಿತ್ ಎಂಬುವರಿಗೆ ಜಗದೀಶ್ ಎಂಬಾತ ಪರಿಚಿತನಾಗಿದ್ದು, ಫೆ.7ರಂದು ಚಿಕ್ಕಮಗಳೂರು ವಾಸಿ ಜಾಫರ್ ಎಂಬ ವ್ಯಕ್ತಿ (ಭದ್ರಾ ಜಲಾಶಯ) ಲಕ್ಕವಳ್ಳಿ ಡ್ಯಾಮ್ ಬಳಿಯಲ್ಲಿ 40 ಕೋಟಿ ಹಣ ಗೋಡೋನ್‌ನಲ್ಲಿ ಇದ್ದು ಒಂದಕ್ಕೆ ಎರಡರಷ್ಟು ಹಣ ನೀಡುತ್ತಾನೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.


ಈ ಮಾತನನ್ನು ನಂಬಿ ಫೆ.13ರಂದು ನಿತೀಶ್ ಪಂಡಿತ್ ಮತ್ತು ಜಗದೀಶ್ ಹಾಗೂ ಅಭಿಜಿತ್ ರವರು 500 ರೂ. ಮುಖ ಬೆಲೆಯ ಒಟ್ಟು  10 ಲಕ್ಷ ನಗದು ಹಣ ಜಾಫರ್‌ಗೆ ನೀಡಿದ್ದು, ಈ ಹಣಕ್ಕೆ ಬದಲಾಗಿ ಒಂದು ಕೆಂಪು ಬಣ್ಣದ ಸೂಟ್‌ಕೇಸ್ ನೀಡಲಾಗಿದೆ. ಇದನ್ನು ಓಪನ್ ಮಾಡಿ ನೋಡಿದಾಗ 100 ರೂ. ಮುಖ ಬೆಲೆಯ 147 ನೋಟುಗಳಿದ್ದು, ಒಟ್ಟು 14,700 ರೂ ಹಣವಿರುವುದು ತಿಳಿದು ಬಂದಿದೆ. ಉಳಿದಂತೆ ಬಾಕ್ಸ್ ಒಳಗೆ ನ್ಯೂಸ್ ಪೇಪರ್‌ಗಳನ್ನು ಮಡಚಿ ಪ್ಯಾಕ್ ಮಾಡಿ ಇಟ್ಟಿದ್ದು, 9,85,300 ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ನಿತೀಶ್ ಪಂಡಿತ್ ಪೇಪರ್‌ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

******

ಖಾಸಗಿ ಹಣಕಾಸು ಸಂಸ್ಥೆಗೆ ವಂಚನೆ

ಭದ್ರಾವತಿ: ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿಯೊಬ್ಬ ಲಕ್ಷಾಂತರ ರು. ಹಣ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಿದ್ಧಾರೂಢ ನಗರದ ಭಾರತ್ ಫೈನಾನ್ಸಿಯಲ್ ಇನ್ ಕ್ಲೋಷನ್ ಲಿಮಿಟೆಡ್ ಸಿಬ್ಬಂದಿ ದಿನೇಶ್ ಸುಮಾರು 3,70,144 ರು. ಕಬಳಿಸಿದ್ದು, ಸುಮಾರು 1 ವರ್ಷದಿಂದ ದಿನೇಶ್ ಸಂಸ್ಥೆಯಿಂದ ಸಾಲ ನೀಡಿದಂತಹ ಒಟ್ಟು 25 ಮಹಿಳಾ ಸಂಘಗಳ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದನು. ಹಣವನ್ನು ಸಂಗ್ರಹಿಸಿ ಸಂಸ್ಥೆಯ ಖಾತೆಗೆ ಜಮಾ ಮಾಡುತ್ತಿದ್ದನು. ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಒಟ್ಟು 3,70,144 ರು. ವ್ಯತ್ಯಾಸ ಕಂಡುಬಂದಿದೆ. ಹಣದ ಬಗ್ಗೆ ಈತನನ್ನು ವಿಚಾರ ಮಾಡಿದಾಗ ಹಣ ಸ್ವಂತಕ್ಕೆ ಬಳಸಿಕೊಂಡಿರುತ್ತೇನೆಂದು ಹಾಗೂ  20 ದಿನಗಳಲ್ಲಿ ಹಣ ಜಮಾ ಮಾಡುವುದಾಗಿ ತಿಳಿಸಿದ್ದಾನೆ. ಆದರೆ ಒಟ್ಟು 2,23,875 ರು. ಹಣ ಬಾಕಿ ಉಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಬಸವರಾಜ್‌ಎಂಬುವರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post