ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ಳಾರೆ; ಜ.15ಕ್ಕೆ ವೇದಾಮೃತ ಚಿಕಿತ್ಸಾಲಯದಲ್ಲಿ ಉಚಿತ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಶಿಬಿರ

ಬೆಳ್ಳಾರೆ; ಜ.15ಕ್ಕೆ ವೇದಾಮೃತ ಚಿಕಿತ್ಸಾಲಯದಲ್ಲಿ ಉಚಿತ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಶಿಬಿರ

 


ಬೆಳ್ಳಾರೆ: ಇಲ್ಲಿನ ವೇದಾಮೃತ ಚಿಕಿತ್ಸಾಲಯದಲ್ಲಿ ಇದೇ ಬರುವ 15 ಜನವರಿ 2023, ಆದಿತ್ಯವಾರದಂದು ಉಚಿತ ಮೂಳೆ ಖನಿಜಾಂಶ ಸಾಂದ್ರತೆ (BMD TEST)ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. 


ಮೂಳೆ ಖನಿಜಾಂಶ ಸಾಂದ್ರತೆ ತಪಾಸಣೆಯ ಅವಶ್ಯಕತೆವುಳ್ಳವರು, 30 ವರ್ಷ ಮೇಲ್ಪಟ್ಟವರು, ಋತುಸ್ರಾವ ನಿಂತ ಮಹಿಳೆಯರು, ಮೂಳೆ ಸವೆತದ ಕೌಟುಂಬಿಕ ಹಿನ್ನಲೆ ಇರುವವರು, ಇತ್ತೀಚೆಗೆ ಮೂಳೆ ಮುರಿತಕ್ಕೆ ಒಳಗಾದವರು, ಆಗಾಗ ಗಂಟುನೋವು  ಕಾಣಿಸಿಕೊಳ್ಳುವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ವೇದಾಮೃತ ಚಿಕಿತ್ಸಾಲಯದ ತಜ್ಞ ವೈದ್ಯರಾದ ಡಾ. ಕಾವ್ಯ ಜೆ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಶಿಬಿರವು ಪೂರ್ವಾಹ್ನ 10-00 ರಿಂದ ಸಂಜೆ 3-00 ಗಂಟೆಯವರೆಗೆ ನಡೆಯಲಿದೆ. 


ಸ್ಥಳ : ವೇದಾಮೃತ ಚಿಕಿತ್ಸಾಲಯ, ಹರ್ಷ ಕಾಂಪ್ಲೆಕ್ಸ್, ಕಿರಣ್ ಪ್ರಿಂಟರ್ಸ್ ಎದುರು, ಕೆಳಗಿನ ಪೇಟೆ,  ಬೆಳ್ಳಾರೆ

0 Comments

Post a Comment

Post a Comment (0)

Previous Post Next Post