ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವೇದ ಚಲನಚಿತ್ರದ ಪ್ರಚಾರದಲ್ಲಿ ಭಾಗಿಯಾದ ಶಿವಣ್ಣ ಮತ್ತು ಸಂಗಡಿಗರು

ವೇದ ಚಲನಚಿತ್ರದ ಪ್ರಚಾರದಲ್ಲಿ ಭಾಗಿಯಾದ ಶಿವಣ್ಣ ಮತ್ತು ಸಂಗಡಿಗರು

 


ಚಳ್ಳಕೆರೆ: 'ವೇದ' ಚಲನಚಿತ್ರ ಪ್ರಚಾರಕ್ಕಾಗಿ ಬುಧವಾರ ಬಳ್ಳಾರಿ- ಹೊಸಪೇಟೆಗೆ ಹೋಗುತ್ತಿದ್ದ ಚಲನಚಿತ್ರ ನಟ ಶಿವರಾಜಕುಮಾರ್ ಮತ್ತು ಸಂಗಡಿಗರನ್ನು ಇಲ್ಲಿನ ಪುನಿತ್‍ ರಾಜಕುಮಾರ್ ಮತ್ತು ಶಿವರಾಜಕುಮಾರ್ ಅಭಿಮಾನಿ ಬಳಗದವರು ನಗರದ ನೆಹರೂ ವೃತ್ತದಲ್ಲಿ ತಡೆದು ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ಪ್ರಮುಖ ಬೀದಿಯಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು.


ಚಿತ್ರದುರ್ಗ ಮಾರ್ಗದಲ್ಲಿ ದಿವಂಗತ ಪುನಿತ್ ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದ ನಂತರ ಅಭಿಮಾನಿ ಬಳಗದವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.


ನಂತರ ವೇದ ಚಲನಚಿತ್ರ ಪ್ರದರ್ಶನ ನಡೆಸುತ್ತಿದ್ದ ರಾಮಕೃಷ್ಣ ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿ ಬಳಗದವರು ಸಿಹಿ ಹಂಚಿದರು.


ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜನಪ್ಪ, ಸದಸ್ಯ ಪ್ರಕಾಶ್, ಮಾಜಿ ಸದಸ್ಯ ಚೇತನ್‍ಕುಮಾರ್, ನೇತಾಜಿ ಸ್ನೇಹ ಬಳಗದ ತಾಲ್ಲೂಕು ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕನ್ನಡ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಟಿ.ಜೆ.ವೆಂಕಟೇಶ್, ಶಿವರಾಜಕುಮಾರ್ ಅಭಿಮಾನಿ ಬಳಗದ ತಾಲ್ಲೂಕು ಅಧ್ಯಕ್ಷ ಪ್ರಕಾಶ್, ನಿಸರ್ಗ ಗೋವಿಂದರಾಜ, ನಾಗರಾಜ, ತಿಪ್ಪೇಸ್ವಾಮಿ, ಸುರೇಶ್, ಮಂಜುನಾಥ್ ಇದ್ದರು.


0 Comments

Post a Comment

Post a Comment (0)

Previous Post Next Post