ಹಾವೇರಿ: 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆಯಿಂದ ಆರಂಭವಾಗಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ.
ನಗರದ ಹೊರವಲಯದಲ್ಲಿ 128 ಎಕರೆ ವಿಸ್ತೀರ್ಣದಲ್ಲಿ ವಿವಿಧ ವೇದಿಕೆಗಳನ್ನು ನಿರ್ಮಿಸಲಾಗಿದೆ.
ಒಟ್ಟಾರೆ 30 ಸಾವಿರ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮೂರು ವೇದಿಕೆಯಲ್ಲಿಯೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಪುಸ್ತಕ ಹಾಗೂ ವಾಣಿಜ್ಯ ಬಳಕೆಯ 600ಕ್ಕೂ ಹೆಚ್ಚು ಮಳಿಗೆಗಳು ಸಿದ್ಧವಾಗಿದೆ. ಫಲಪುಷ್ಪ ಪ್ರದರ್ಶನಕ್ಕೂ ಸಕಲ ತಯಾರಿ ನಡೆದಿದೆ. ರಾಜ್ಯದ ಎಲ್ಲೆಡೆಯಿಂದ ಸಮ್ಮೇಳನಕ್ಕೆ ಸಾಹಿತ್ಯಾಸಕ್ತ ಅಭಿಮಾನಿಗಳು ಆಗಮಿಸಲಿದ್ದು, ಅವರಿಗಾಗಿ ವಿಶೇಷ ಖಾದ್ಯ ತಯಾರಾಗುತ್ತಿದೆ.
ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿದಿನವೂ 1.5 ಲಕ್ಷ ಜನರಿಗೆ ಊಟ ಹಾಗೂ 70 ಸಾವಿರ ಮಂದಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮೂರು ದಿನವೂ ವಿಧವಿಧದ ಖಾದ್ಯಗಳನ್ನು ಉಣಬಡಿಸಲಾಗುತ್ತದೆ. ಉಪ್ಪಿಟ್ಟು, ಕೇಸರಿಬಾತ್, ಶೇಂಗಾ ಹೋಳಿಗೆ, ರೊಟ್ಟಿ ಪಲ್ಯ, ಚಪಾತಿ, ಅನ್ನ, ಸಾಂಬಾರ್, ಶೇಂಗಾ ಚಟ್ನಿ, ಪುಳಿಯೊಗರೆ, ಹೆಸರುಬೇಳೆ ಪಾಯಸ, ವಾಂಗಿಬಾತ್, ಪಲಾವ್, ಬಗೆಬಗೆಯ ಸಿಹಿ ತಯಾರಾಗಿದೆ.
Post a Comment