ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಪತ್ತೆಯಾಗಿದ್ದ ಯುವತಿ ವಿವಾಹವಾಗಿ ಪತ್ತೆ

ನಾಪತ್ತೆಯಾಗಿದ್ದ ಯುವತಿ ವಿವಾಹವಾಗಿ ಪತ್ತೆ

 


ಸುರತ್ಕಲ್: ಜನವರಿ 16ರಂದು ಮಣಪ್ಪುರಂ ಫೈನಾನ್ಸ್ ಕೆಲಸಕ್ಕೆ ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ಶಿವಾನಿ(20) ಪ್ರೀತಿಸುತ್ತಿದ್ದ ಯುವಕನ ಜೊತೆಗೆ ಮದುವೆಯಾಗಿ ಠಾಣೆಗೆ ಹಾಜರಾದ ಘಟನೆ ನಡೆದಿದೆ.

ಶಿವಾನಿ ಫೈನಾನ್ಸ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಡಿಜೆ ಆಪರೇಟರ್ ಆಗಿರುವ ಧನುಷ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಅದೇ ರೀತಿ ಆತನೊಂದಿಗೆ ಮನೆ ಬಿಟ್ಟು ತೆರಳಿದ್ದಾಳೆ. ಹಣವಿಲ್ಲದೆ ಜೋಡಿ ರೈಲಿನ ಮೂಲಕ ಮಡಗಾಂವ್ ಗೆ ಹೋಗಿ ಅಲ್ಲಿ ಮೊಬೈಲ್ ಒಂದನ್ನು ಮಾರಿಬಂದ ಹಣದಲ್ಲಿ ಖರ್ಚು ಮಾಡಿ, ಅಲ್ಲಿಂದ ಮುಂದೆ ಇವರಿಬ್ಬರು ದೆಹಲಿಗೆ ತೆರಳಿ, ಅಲ್ಲಿ ಇನ್ನೊಂದು ಮೊಬೈಲ್ ಮಾರಿ, ಆ ಹಣ ಖರ್ಚು ಆದ ಬಳಿಕ ಅಲ್ಲಿಂದ ಮರಳಿ ಮಡಗಾಂವ್ ಗೆ ಬಂದಿದ್ದಾರೆ. ಅಲ್ಲಿ ಹಣಕ್ಕಾಗಿ ಸ್ನೇಹಿತರಲ್ಲಿ ಕೇಳಿದ್ದು ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದರು.

ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸುರತ್ಕಲ್ ಪೊಲೀಸರು ಗೂಗಲ್ ಪೇ ನಂಬರ್ ಟ್ರೇಸ್ ಮಾಡಿ ಜೋಡಿಯ ಬೆನ್ನು ಬಿದ್ದು ಪತ್ತೆ ಹಚ್ಚಿದರು.

0 Comments

Post a Comment

Post a Comment (0)

Previous Post Next Post