ಕಾಸರಗೋಡು: ಜಿಲ್ಲೆಯ ಪೈವಳಿಕೆ- ಚೇವಾರ್ ರಸ್ತೆಯಲ್ಲಿರುವ ಕಟ್ಟದಮನೆ ಸೇತುವೆ ಬಳಿ ಕಂಪ್ರೆಸರ್ ಟ್ರಾಕ್ಟರ್ ಮಗುಚಿ ಚಾಲಕ ಸಾವಿಗೀಡಾಗಿದ್ದಾನೆ. ಜತೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಗಾಯಗಳಾಗಿವೆ. ಮೃತರನ್ನು ನೇಪಾಳದ ರುನ್ಕಾವ್ ನಿವಾಸಿ ಸುರೇಶ್ ಪೊನ್ ಎಂದು ಗುರುತಿಸಲಾಗಿದೆ. ಜನವರಿ 11ರ ಬುಧವಾರ ಈ ಘಟನೆ ನಡೆದಿದೆ. ಟ್ರ್ಯಾಕ್ಚರ್ ಮಗುಚಿ ಬಿದ್ದಾಗ ಸುರೇಶ್ ಅದರಡೆಯಲ್ಲಿ ಸಿಲುಕಿದ್ದರು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಈತ ಕೆಲಸಕ್ಕೆ ಸೇರಿದ್ದ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಖಾಸಗಿ ಶಾಲಾ ಬಸ್‌ಗೆ ಬೈಕ್ ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳು ಸಾವು:
ಖಾಸಗಿ ಶಾಲಾ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಮೃತರನ್ನು ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಅಭಿಷೇಕ್ ಮತ್ತು ಪ್ರೀತೇಶ್ ಎಂದು ಗುರುತಿಸಲಾಗಿದೆ. ಮೂವರು ಬೈಕ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಮಂಜೇಶ್ವರದ ಮೀಯಪದವು ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು ಮೀಯಪದವು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಪೂರ್ಣಿಮಾ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ದಂಪತಿಯ ಪುತ್ರ ಪ್ರೀತೇಶ್ ಶೆಟ್ಟಿ (18) ಎಂದು ಗುರುತಿಸಲಾಗಿದೆ. ಅಭಿಷೇಕ್ ಭಂಡಾರಿ (18) ಮೀಯಪದವಿನ ದಿನಗೂಲಿ ಕಾರ್ಮಿಕರಾದ ಸುರೇಶ್ ಭಂಡಾರಿ ಮತ್ತು ಹರಿಣಾಕ್ಷಿ ಭಂಡಾರಿ ದಂಪತಿಯ ಪುತ್ರರಾಗಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಯನ್ನು ದಿನಗೂಲಿ ಕಾರ್ಮಿಕ ವಿಶ್ವನಾಥ ಶೆಟ್ಟಿ ಮತ್ತು ಮೀನಾಕ್ಷಿ ದಂಪತಿಯ ಪುತ್ರ ನಮಿತ್ ಶೆಟ್ಟಿ (17) ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق