ಕಾಂತಾರ ಸಿನಿಮಾ ಕನ್ನಡ ಸಿನಿಮಾದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಹೊಸ ಸಂಚಲನ ಸೃಷ್ಟಿಸಿದ 'ಕಾಂತಾರ' ಸಿನಿಮಾ ಸದ್ಯದಲ್ಲೇ ಕಿರುತೆರೆಗೆ ಬರಲಿದೆ.
ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕೆಲವೇ ದಿನಗಳಲ್ಲಿ 'ಕಾಂತಾರ' ಸಿನಿಮಾ ಟೆಲಿಕಾಸ್ಟ್ ಆಗಲಿದೆ.
ಅತೀ ಶೀಘ್ರದಲ್ಲೇ 'ಕಾಂತಾರ' ನಿಮ್ಮ ಮುಂದೆ'' ಎಂದು ಸ್ಟಾರ್ ಸುವರ್ಣ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದೆ.
ಆದರೆ, 'ಕಾಂತಾರ' ಸಿನಿಮಾದ ಪ್ರಸಾರ ದಿನಾಂಕ ಹಾಗೂ ಸಮಯದ ಬಗ್ಗೆ ಈಗಲೇ ತಿಳಿಸಿಲ್ಲ. ಸಿನಿಪ್ರಿಯರು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನ ಬರೆದಿರುವ 'ಕಾಂತಾರ' ಸಿನಿಮಾ ಟಿವಿಯಲ್ಲಿ ಪ್ರಸಾರವಾದರೆ ಟಿಆರ್‌ಪಿ ಲೆಕ್ಕದಲ್ಲಿ ಹೊಸ ರೆಕಾರ್ಡ್ ಸೃಷ್ಟಿಸೋದು ಪಕ್ಕಾ ಅಂತಿದ್ದಾರೆ.
ಟಿವಿಯಲ್ಲಿ 'ಕಾಂತಾರ' ಚಿತ್ರ ಯಾವಾಗ ಪ್ರಸಾರ ಆಗಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಪ್ರಸಾರ ದಿನಾಂಕದ ಬಗ್ಗೆ ಸದ್ಯದಲ್ಲೇ ವಾಹಿನಿಯವರು ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಚಿತ್ರ ಪ್ರಸಾರ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. .
إرسال تعليق