ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋವಿನ ಸಂಕಟ

ಗೋವಿನ ಸಂಕಟ

 


ಪೂಜನೀಯ ಮಾತೆ ಗೋವು

ಭಾದಿಸಿತೊಂದು ನೋವು

ಅದೇ ಚರ್ಮಗಂಟು ನೋವು

ಪರಿಹಾರವದಕೆ ಬರೀ ಮೇವು


ಹಸಿವ ನೀಗಲು ಊರ ಸುತ್ತುವುದು

ಸಿಕ್ಕ ಸಿಕ್ಕ ಹಸಿಹುಲ್ಲನ

ತಿಂದು ತೇಗುವುದು

ಗ್ರಹಚಾರದಿಂದ ಅಂಟಿಕೊಂಡಿತು ಗಂಟು ನೋವು


ನೋವ ನುಂಗಿ ಹೊಟ್ಟೆ ಪಾಡಿಗೆ 

ಮೇವ ಹುಡುಕಿತು

ತನ್ನ ನೋವ ಹೊಟ್ಟೆಗೆ ಹಾಕಿ

ನಗುಮೊಗದಿ ಹಾದಿ ಸಾಗಿತು


ಜನರೇಕೊ ಅದರ ನೋವ ಗಮನಿಸದೆ ಹೋದರು

ಗೋವೆಕೊ ನೋವ ನುಂಗಿ

ಹಸಿವಿಗಾಗಿ ಮತ್ತೆ ಪಯಣ

ಸಾಗಿಸಿತು


ಗಂಟು ನೋವಿಗೆ ಇನ್ನು 

ಬರೆ ಎಳೆಯಿತು 

ಕೊಕ್ಕರೆಗಳ ಕಾಟವು

ಹಸಿವಿನ ಜೊತೆಗೆ

ಗಂಟಲಿ ರಕ್ತದ ಓಕುಳಿ

ಸುರಿಯಲಾರಂಭಿಸಿತು


ಮೂಕ ಪ್ರಾಣಿಯ ವೇದನೆ

ಯಾರು ತಿಳಿಯದಾದರೂ

ದೇವರ ಮೊರೆ ಹೋಗಿ

ಗೋವು ಮೌನವಾಗಿ

ಮನದೊಳಗೆ ಕಣ್ಣೀರು

ಸುರಿಸಿ

ದಿನವ ಸಾಗಿಸಿತು

ಬರಹ: ಹರ್ಷಿತಾ ಕುಲಾಲ್

0 Comments

Post a Comment

Post a Comment (0)

Previous Post Next Post