ರಾಮನಗರ: ಜಿಲ್ಲೆಯ ಹಾರೋಹಳ್ಳಿ ಬಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತವಾಗಿ ಎಂಬ್ರಾಯಿಡರಿ ವರ್ಕ್ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ RSETI, 30 ದಿನಗಳ ವರೆಗೆ ಉಚಿತವಾಗಿ ಎಂಬ್ರಾಯಿಡರಿ ವರ್ಕ್ ತರಬೇತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಿರುವುದಾಗಿ ಹೇಳಿದೆ.
18 ರಿಂದ 45 ವರ್ಷ ವಯೋಮಿತಿಯವರು ತರಬೇತಿಗಾಗಿ ಅರ್ಜಿಯನ್ನು ಸಲ್ಲಿಸಬಹುದು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ ಎಂದಿದೆ.
ದಿನಾಂಕ 23-01-2023ರಿಂದ ತರಬೇತಿ ಪ್ರಾರಂಭವಾಗಲಿದೆ. ಆಸಕ್ತ ಸ್ವ ಉದ್ಯೋಗಾಕಾಂಕ್ಷಿಗಳು ಅರ್ಜಿಯನ್ನು ಸಲ್ಲಿಸಬಹುದು. ತರಬೇತಿಯ ಬಳಿಕ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ಹೇಳಿದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ನಿರ್ದೇಶಕರು-8105185202 ಸಂಖ್ಯೆಗೆ, ಇಲ್ಲವೇ ತರಬೇತಿ ಸಂಯೋಜಕರ ಸಂಖ್ಯೆ-9972381707, 9901512638, 7406859162, 9606638720ಗ ಸಂಪರ್ಕಿಸಿ, ಪಡೆಯಬಹುದಾಗಿದೆ.
Post a Comment