ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬ ರಾಷ್ಟ್ರಧ್ವಜದಿಂದ ಟೇಬಲ್ ಸ್ವಚ್ಛ ಮಾಡಿರುವ ವಿಡಿಯೋ ವೈರಲ್ ಆಗಿದೆ. ಆತ ಟೇಬಲ್ ಮೇಲೆ ಇಟ್ಟಿದ್ದ ರಾಷ್ಟ್ರಧ್ವಜವನ್ನು ತೆಗೆದುಕೊಂಡು ತನ್ನ ಮುಖ ಒರೆಸಿಕೊಳ್ಳುವುದಲ್ಲದೆ ಬಳಿಕ ಚೇರ್ ಹಾಗೂ ಟೇಬಲ್ ಸ್ವಚ್ಛ ಮಾಡಿದ್ದ.
ಇದಾದ ಬಳಿಕ ಧ್ವಜವನ್ನು ಕೆಳಗೆ ಎಸೆದಿದ್ದ. ಈ ಘಟನೆ ಕೇರಳದಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದ್ದು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ವ್ಯಕ್ತಿ ವಿರುದ್ಧ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಆತನನ್ನು ಬಂಧಿಸಿ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದರು.
ಈಗ ಈ ಕುರಿತಂತೆ ತನಿಖೆ ನಡೆಸಿರುವ ಕೇರಳ ಪೊಲೀಸರು ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಅಸಲಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.
ಘಟನೆ ನಡೆದಿರುವುದು ಒಡಿಶಾದ ಪುರಿ ಜಿಲ್ಲೆಯ ಸಿಮಿಲಿ ಗ್ರಾಮ ಪಂಚಾಯಿತಿಯಲ್ಲಿ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಈ ಕುರಿತು ಅಲ್ಲಿನ ಪೊಲೀಸರಿಗೆ ಮಾಹಿತಿಯನ್ನೂ ಸಹ ನೀಡಲಾಗಿದೆ ಎಂದು ಹೇಳಲಾಗಿದೆ.
Post a Comment