ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಯವರಿಗೆ ಸನ್ಮಾನ

ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಯವರಿಗೆ ಸನ್ಮಾನ



 ಪುತ್ತೂರು: ದ.ಕನ್ನಡ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇಲ್ಲಿನ ಮಾಧುರಿ ಸೌಧ ಸಭಾಂಗಣದಲ್ಲಿ ಜರುಗಿದ ಅಂತಾರಾಜ್ಯ ಮಟ್ಟದ ಮಧು ಕವಿಗೋಷ್ಠಿಯ ಸಮಾರಂಭದಲ್ಲಿ ಹಿರಿಯ ಕವಿ, ನಿವೃತ್ತ ಶಿಕ್ಷಕ , ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


40 ವರ್ಷ ಶಿಕ್ಷಕರಾಗಿ, ಪತ್ರಿಕೆಯಲ್ಲಿ ಅಂಕಣಕಾರರಾಗಿ, ಉತ್ತಮ ವ್ಯಂಗ್ಯ ಚಿತ್ರಕಾರರಾಗಿ , ಕಲಾವಿದನಾಗಿ, ಕವಿಯಾಗಿ ಸಾಧನೆ ಮಾಡಿದ ಕುಕ್ಕುವಳ್ಳಿಯವರು ಮಧು ಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. 


ಕನ್ನಡ ಸಾಹಿತ್ಯ ಪರಿಷತಿನ ಅಧ್ಯಕ್ಷ ಉಮೇಶ್ ನಾಯಕ್ ಕನ್ನಡ ಶಾಲು ಹೊದಿಸಿ ಗೌರವಿಸಿ ‘ಮುಕ್ತಕ ಪುಷ್ಪ’ ಕೃತಿ ಬಿಡುಗಡೆ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ಜಿಲ್ಲಾಧ್ಯಕ್ಷ ಡಾ.ಸುರೇಶ್ ನೆಗಳಗುಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಮುದ್ರವಳ್ಳಿ ವಾಸು, ಪಿಂಗಾರ ಸಾಹಿತ್ಯ ಬಳಗದ ಸಂಚಾಲಕ ರೈಮಂಡ್ ಡಿಕುನ್ಹ ಕವಿಗೋಷ್ಠಿಗೆ ಚಾಲನೆ ನೀಡಿ 50 ಕವಿಗಳು ಸ್ವರಚಿತ ಕವನ ವಾಚಿಸಿದರು, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಶುಭ ಹಾರೈಸಿದರು.


0 تعليقات

إرسال تعليق

Post a Comment (0)

أحدث أقدم