ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನ ಹುಂಡಿಯನ್ನೇ ಕದ್ದ ಕಳ್ಳರು

ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನ ಹುಂಡಿಯನ್ನೇ ಕದ್ದ ಕಳ್ಳರು

 


ರಾಯಚೂರು : ತಾಲೂಕಿನ ಮನ್ಸಲಾಪುರದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹುಂಡಿಯನ್ನೆ ಕಳ್ಳತನ ಮಾಡಿದ ಘಟನೆಯೊಂದು ತಡರಾತ್ರಿ ನಡೆದಿದೆ.‌


ಬೆಟ್ಟದ ಮೇಲಿರುವ ದೇವಸ್ಥಾನ ಬೀಗ ಮುರಿದು ಹುಂಡಿಯನ್ನೆ ಕದ್ದು, ಐದಾರು ಜನರು ಸೇರಿ ಈ ಕೃತ್ಯವನ್ನು ಎಸಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. 


ಈ ದೇವಸ್ಥಾನದಲ್ಲಿ ಕೆಲ ದಿನಗಳ ಹಿಂದೆ ಜಾತ್ರೆ ನಡೆದಿದ್ದು, ಹುಂಡಿಗೆ ಲಕ್ಷಾಂತರ ಹಣ ಸಂಗ್ರಹಗೊಂಡಿತ್ತು. ಇಷ್ಟರಲ್ಲೇ ಹುಂಡಿ ಹಣ ಎಣಿಕೆ ಮಾಡುವ ಗ್ರಾಮಸ್ಥರು ಚರ್ಚೆಗೆ ಒಳಗಾಗಿದ್ದರು.


 ಆದರೆ ಇದೀಗ ದೇವಸ್ಥಾನ ಲಕ್ಷಾಂತರ ಹಣ ಖದೀಮರ ಪಾಲಾಗಿದೆ

0 Comments

Post a Comment

Post a Comment (0)

Previous Post Next Post