ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಂಸ್ಕೃತಿಕ ಲೋಕದ ಬಹುಮುಖ ಪ್ರತಿಭೆ ಕು. ಅನನ್ಯ ಉಡುಪ

ಸಾಂಸ್ಕೃತಿಕ ಲೋಕದ ಬಹುಮುಖ ಪ್ರತಿಭೆ ಕು. ಅನನ್ಯ ಉಡುಪ

 


ನಮ್ಮ ಮಕ್ಕಳು ವಿವಿಧ ಪ್ರತಿಭೆಗಳು. ಅವರ ಪ್ರತಿಭಾ ವಿಕಾಸಕ್ಕೆ ನಾವು ಅವಕಾಶ ನೀಡಿ ವೇದಿಕೆಗಳ ಕಲ್ಪಿಸಿದರೆ ಬಾಲ ಕಲಾವಿದರ ಸಾಧನೆ

 ಕಲಾಮಾತೆಯ ಶುಭಾಶೀರ್ವಾದದೊಂದಿಗೆ ಇಡೀ ವಿಶ್ವದಲ್ಲೇ ಬೆಳಗುವುದು. ಅಂಥ ಬಾಲ ಕಲಾವಿದೆ ಕು.ಅನನ್ಯ. ಉಡುಪ. 


ಇವರು ಪ್ರಸ್ತುತ ವೇಣೂರಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. 


ವೇಣೂರಿನ ನಾಗೇಶ್ ಮತ್ತು ಶ್ರೀಮತಿ ಸುಮನಾ ನಾಗೇಶ್ ಇವರ ಪುತ್ರಿ ಅನನ್ಯ ಅವರದು ಅನನ್ಯ ಪ್ರತಿಭಾ ಸಾಧನೆ.

 

ಅನನ್ಯ ಇವರ ಹವ್ಯಾಸಗಳು ಹಲವು- ಸಂಗೀತ, ನೃತ್ಯ,ಚಿತ್ರಕಲೆ,ಕ್ರಾಫ್ಟ್, ಕಾರ್ಯಕ್ರಮ ನಿರೂಪಣೆ, ಭಾಷಣ ಮಾತ್ರವಲ್ಲದೆ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಇವುಗಳಲ್ಲೂ ಆಸಕ್ತಿ ಹೊಂದಿರುವ ಇವರು, ಇವುಗಳನ್ನು ಗುರುಗಳಿಂದ ಅಭ್ಯಾಸ ಮಾಡುತ್ತಿದ್ದಾರೆ.


ಇವರು ಪ್ರತಿಭಾ ಕಾರಂಜಿ ಯಲ್ಲಿ ದೇಶಭಕ್ತಿಗೀತೆ ಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಮತ್ತು ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ವನ್ನು ಪಡೆದಿರುತ್ತಾರೆ. ಎಂಟರ ಹರೆಯದಲ್ಲೇ... ಜೆಸಿಐ ,ಮಡಂತ್ಯಾರ್ ಇವರು ನಡೆಸಿದ ಮುದ್ದು ರಾಧೆ ಸ್ಪರ್ಧೆಯಲ್ಲಿ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದ ಹಿರಿಮೆ ಈಕೆಯದು.


 ಕಾರ್ಕಳದ ಅಜೆಕ್ಕಾರಿನಲ್ಲಿ ನಡೆದ ಗ್ರಾಮ ಸಾಹಿತ್ಯ ಸಮ್ಮೇಳನದಲ್ಲಿ "ಬಾಲ ಪ್ರತಿಭಾ" ಗೌರವವನ್ನು ಪಡೆದಿರುತ್ತಾರೆ. ಉಪ್ಪಿನಂಗಡಿ ಯಲ್ಲಿ ಕಲಾವಿದರ ಸಂಗಮದಲ್ಲಿ ಭಾಗವಹಿಸಿ ಸ್ಮರಣಿಕೆ ಪಡೆದಿರುತ್ತಾರೆ. 


ವಾಯ್ಸ್ ಆಫ್ ಆರಾಧನ ಅವಾರ್ಡ್ಸ್ ಪಡೆದಿರುತ್ತಾರೆ. LOCKDOWN ಸಮಯದಲ್ಲಿ ನಡೆದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಅನನ್ಯ ಕಲಿಯುವಿಕೆಯಲ್ಲೂ ಸದಾ ಮುಂದು.


ಕಲಾಸ್ವಪ್ನ ತಂಡದವರು ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.


ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ ಇವರು ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ  ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಸಾಧನೆ ಅನನ್ಯ ಇವರದ್ದು.


 ವಾಷ್ಟರ್ ಫ಼ೈವ್ ಸ್ಟಾರ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ವಾರದ ಶ್ರೇಷ್ಠ ಗಾಯಕಿ ಬಿರುದನ್ನೂ ತನ್ನದಾಗಿಸಿ ಕೊಂಡಿರುವ ಈ ಬಾಲ ಪ್ರತಿಭೆ


ತುಳುವೆರೆ ಚಾವಡಿ ಬೆಂಗಳೂರು ಇವರು ನಡೆಸಿದ ಜೋಕುಲೆ ತೆಲಿಕೆ ನಲಿಕೆ ಸ್ಪರ್ಧೆಯಲ್ಲೂ ಭಾಗವಹಿಸಿರುತ್ತಾರೆ. ಶ್ರೀ ಧರ್ಮಸ್ಥಳ ಶಿಕ್ಷಣ ಯೋಜನೆ ಶಾ೦ತಿವನ ಟ್ರಸ್ಟ್ ಇವರು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.


 ವಾಯ್ಸ್ ಆಫ್ ಆರಾಧನ ಫೇಸ್ಬುಕ್ ಪೇಜ್ ನಲ್ಲಿ ಹಲವಾರು ಲೈವ್ ಕಾರ್ಯಕ್ರಮವನ್ನು ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿರುತಾರೆ. ಅನನ್ಯ ಇವರ ಪ್ರತಿಭೆ ಬೆಳಗಿ ನಾಡಿಗೇ ಬೆಳಕಾಗಲಿ ಎಂದು ಸದಾ ಶುಭವನ್ನೇ ಹಾರೈಸುವ ನಿಮ್ಮ ಪ್ರೀತಿಯ ವಾಯ್ಸ್ ಆಫ್ ಆರಾಧನ ಮೂಡುಬಿದಿರೆ ಹಾಗೂ ಶ್ರೀ ಕೃಷ್ಣ ಯುವಕ ಮಂಡಲ ‌ರಿ.ಪುತ್ತೂರು


ಮಾಹಿತಿ:ನವೀನ್ ಪುತ್ತೂರು.


ಬರಹ: ನಾರಾಯಣ ರೈ ಕುಕ್ಕುವಳ್ಳಿ


0 تعليقات

إرسال تعليق

Post a Comment (0)

أحدث أقدم