ದಾವಣಗೆರೆ : ಮೊಬೈಲ್ ಸ್ಫೋಟಗೊಂಡ ಪರಿಣಾಮ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಲ್ಲಿ ವಿದ್ಯಾರ್ಥಿ ಮೃತಪಟ್ಟ ಘಟನೆಯೊಂದು ಜರ್ಮನಿಯಲ್ಲಿ ಸಂಭವಿಸಿದೆ.
ಮೃತನನ್ನು ದಾವಣಗೆರೆ ನಿವಾಸಿಯಾದ ಕೆ.ರೇವಪ್ಪ ಅವರ ಪುತ್ರ ಸಂತೋಷ್ ಕುಮಾರ್ ಕೆ .ಆರ್(30) ಎಂದು ಗುರುತಿಸಲಾಗಿದೆ.
ಈತ ಜರ್ಮನಿಯ ಕೆಮ್ ನಿಟ್ಸ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಓದುತ್ತಿದ್ದು, 'ಜರ್ಮನಿಯ ಕೆಮ್ ನಿಟ್ಸ್ ನಗರದ ಪಿ.ಜಿ. ಒಂದರಲ್ಲಿ ವಾಸವಾಗಿದ್ದ ಸಂತೋಷ್ ಕುಮಾರ್, ರಾತ್ರಿ ವೇಳೆ ಮೊಬೈಲ್ ಅನ್ನು ಜಾರ್ಜ್ ಗೆ ಇಟ್ಟಿದ್ದ, ಆಗ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಇದರಿಂದ ಕೊಠಡಿಯಲ್ಲಿ ಹೊಗೆ ಆವರಿಸಿಕೊಂಡಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Post a Comment