ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭೀಮರಾವ್ ವಾಷ್ಠರ್ ಮ್ಯೂಸಿಕ್ ಆಲ್ಬಮ್ ಗೆ ಬೆಸ್ಟ್ ಮ್ಯೂಸಿಕ್ ಆಲ್ಬಂ ಅವಾರ್ಡ್ ಪ್ರದಾನ

ಭೀಮರಾವ್ ವಾಷ್ಠರ್ ಮ್ಯೂಸಿಕ್ ಆಲ್ಬಮ್ ಗೆ ಬೆಸ್ಟ್ ಮ್ಯೂಸಿಕ್ ಆಲ್ಬಂ ಅವಾರ್ಡ್ ಪ್ರದಾನ

 


ಸುಳ್ಯ : ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ( ರಿ) ಧಾರವಾಡ ದವರು ಆಯೋಜಿಸಿದ್ದ ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವದಲ್ಲಿ ಸುಳ್ಯದ ಖ್ಯಾತ ಜ್ಯೋತಿಷಿ , ಸಾಹಿತಿ ಮತ್ತು ಗಾಯಕರಾದ ಎಚ್ ಭೀಮರಾವ್ ವಾಷ್ಠರ್ ರವರು ಸಾಹಿತ್ಯ ಬರೆದು ಹಾಡಿರುವ ನಾಗರಹಾಳ ಗುರುಬಾಬಾ ಮ್ಯೂಸಿಕ್ ಆಲ್ಬಮ್ ಗೆ ಧಾರವಾಡದಲ್ಲಿ ಬೆಸ್ಟ್ ಮ್ಯೂಸಿಕ್ ಆಲ್ಬಮ್ ಅವಾರ್ಡ್ ಬಂದಿದೆ.  


ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ  ( ರಿ) ಧಾರವಾಡ ಇದರ ಅಧ್ಯಕ್ಷರಾದ ಶಂಕರ್ ಸುಗತೆ ಮತ್ತು ಖ್ಯಾತ ಚಿತ್ರನಟಿ ರೂಪಿಕಾ ರವರು ಅವಾರ್ಡ್ ನೀಡಿ ಶುಭ ಹಾರೈಸಿದರು. 


ಈ ಸಂದರ್ಭದಲ್ಲಿ ಲಡ್ಡುಮುತ್ಯಾ ಚಲನಚಿತ್ರದ ಖ್ಯಾತಿಯ ನಿರ್ದೇಶಕರಾದ ಅರವಿಂದ್ ಮುಳುಗುಂದ , ಸಿನಿಮಾ ಪಿ ಆರ್ ಓ ಪ್ರಭು ಗಂಜಿಹಾಳ ,ನಿರ್ದೇಶಕ ಜಯತೀರ್ಥ, ನಟ ಮತ್ತು ರಾಜಕೀಯ ನೇತಾರ ಡಾ. ಕಲ್ಮೇಶ್ ಹಾವೇರಿಪೇಠ ಇನ್ನಿತರ ನಟ ನಟಿಯರು ಉಪಸ್ಥಿತರಿದ್ದರು.

0 Comments

Post a Comment

Post a Comment (0)

Previous Post Next Post