ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಮಾರಮಂಗಲ ದೇವಸ್ಥಾನ ವಠಾರದಲ್ಲಿ ನಾಳೆ, ನಾಡಿದ್ದು ಶ್ರೀ ಅಯ್ಯಪ್ಪ ದೀಪೋತ್ಸವ

ಕುಮಾರಮಂಗಲ ದೇವಸ್ಥಾನ ವಠಾರದಲ್ಲಿ ನಾಳೆ, ನಾಡಿದ್ದು ಶ್ರೀ ಅಯ್ಯಪ್ಪ ದೀಪೋತ್ಸವ


ಕಾಸರಗೋಡು: ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಮಾರಮಂಗಲದ ವಠಾರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ಡಿ.20 ಮತ್ತು 21ರಂದು ಜರುಗಲಿದೆ. 21ರಂದು ಬೆಳಿಗ್ಗೆ ಗಣಹೋಮ, ಶರಣಂ ವಿಳಿ, ಮಹಾಪೂಜೆ ಅನ್ನಪ್ರಸಾದ ವಿತರಣೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಅಂದು ಸಂಜೆ 6.30 ರಿಂದ 10.00ರ ತನಕ ಡಾ ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ವತಿಯಿಂದ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮದ ಗಾನ ನೃತ್ಯ ವೈಭವವು ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಗುವುದು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಕಡೆಯಿಂದ ಪ್ರತಿಭಾನ್ವಿತ ಕಲಾವಿದರಾದ ಗುರುರಾಜ್ ಕಾಸರಗೋಡು, ಡಾ ವಾಣಿಶ್ರೀ ಕಾಸರಗೋಡು, ತನ್ವಿ ಶೆಟ್ಟಿ, ಸನುಷ ಸುನಿಲ್, ಚುಕ್ಕಿ ವಿಟ್ಲ, ಹರೀಶ್ ಪಂಜಿಕಲ್ಲು, ಪೂಜಾಶ್ರೀ, ಕೀರ್ತಿ, ಧನ್ವಿತ್ ಕೃಷ್ಣ, ಪ್ರಥಮ್ಯ ಯು ವೈ, ಅಹನಾ ಎಸ್ ರಾವ್, ಭಾಸ್ಕರ್ ಅಡೂರ್, ಸನುಷಾ ಸುಧಾಕರನ್, ನಿರೀಕ್ಷಾ ಸಿ ಎಚ್, ಮೇಧಾ, ಶ್ರದ್ಧಾ ಎ ಎಸ್, ಭಾನ್ವಿ, ವಿಜಿತಾ ಕೇಶವನ್, ಉಷಾ ಸುಧಾಕರನ್, ರಚಿತಾ, ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಭಾಗವಹಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post