ಯುನೈಟೆಡ್ ಕಿಂಗ್ಡಮ್ ರಾಜ 3ನೇ ಕಿಂಗ್ ಚಾರ್ಲ್ಸ್ ಹಾಗೂ ಅವರ ಪತ್ನಿ ಕ್ಯಾಮಿಲ್ಲ ಮೇಲೆ ಮೊಟ್ಟೆ ದಾಳಿ ಪ್ರಯತ್ನ ಮಾಡಲಾಗಿದೆ.
ಉತ್ತರ ಇಂಗ್ಲೆಂಡ್‌ನ ನಗರವೊಂದರಲ್ಲಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ರಾಜದಂಪತಿಗೆ ಮೊಟ್ಟೆ ಎಸೆಯಲಾಗಿದೆ.
ಚಾರ್ಲ್ಸ್ ದಂಪತಿಯನ್ನು ಸ್ವಾಗತಿಸೋಕೆ ಅಂತ ಜನ ಜಮಾಯಿಸಿದ್ದರು. ಈ ವೇಳೆ ದುಷ್ಕರ್ಮಿಯೊಬ್ಬ ಅವರ ಮೇಲೆ ಮೂರು ಮೊಟ್ಟೆಯನ್ನು ಎಸೆದಿದ್ದಾನೆ.
ಆದರೆ ಅದು ದಂಪತಿಯ ಮೇಲೆ ಬಿದ್ದಿಲ್ಲ. ಪಕ್ಕದಲ್ಲಿ ಹೋಗಿ ಬಿದ್ದಿದೆ. ಘಟನೆಗೆ ಸಂಬಂಧಪಟ್ಟಂತೆ ಅಲ್ಲಿನ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ.
إرسال تعليق