ಮಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ, ಖ್ಯಾತ ವಿದ್ವಾಂಸ ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ (72) ಇಂದು ಮುಂಜಾನೆ ನಿಧನರಾದರು.
ಕೆಲವು ದಿನದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಕಲ್ಲಿಕೋಟೆ ಜಿಲ್ಲೆಯ ಕರುವಾಂಪೋಯಿಲ್ ನಿವಾಸಿಯಾಗಿದ್ದ ಎಪಿ ಮುಹಮ್ಮದ್ ಮುಸ್ಲಿಯಾರ್ ಚೇಕುಟ್ಟಿ ಮತ್ತು ಆಯಿಷಾ ಬೀವಿ ದಂಪತಿಯ ಪುತ್ರನಾಗಿ 1950ರಲ್ಲಿ ಜನಿಸಿದರು.
ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಶಿಷ್ಯತ್ವವನ್ನು ಸ್ವೀಕರಿಸಿದರು. 1970ರಲ್ಲಿ ಬಾಖಿಯಾತ್‌ನಲ್ಲಿ ಸನದು ಪಡೆದು ಕಾಂತಪುರಂನಲ್ಲಿ ಮುದರ್ರಿಸ್ ಆಗಿ ಕಾರ್ಯನಿರ್ವಹಿಸಿದ್ದರು.
ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರನ್ನೇ ಹೋಲುತ್ತಿದ್ದ ಕಾರಣ ಇವರನ್ನು ಚೆರಿಯ ಎ.ಪಿ ಉಸ್ತಾದ್ ಎಂದೇ ಕರೆಯಲಾಗುತ್ತಿತ್ತು.
إرسال تعليق