ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಖ್ಯಾತ ಯಕ್ಷಗಾನ ಕಲಾವಿದ, ಮಾತಿನ ಮೋಡಿಗಾರ ಕುಂಬ್ಳೆ ಸುಂದರ ರಾವ್‌ ನಿಧನ

ಖ್ಯಾತ ಯಕ್ಷಗಾನ ಕಲಾವಿದ, ಮಾತಿನ ಮೋಡಿಗಾರ ಕುಂಬ್ಳೆ ಸುಂದರ ರಾವ್‌ ನಿಧನ



ಮಂಗಳೂರು: ತೆಂಕುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ, ಅರ್ಥಧಾರಿ, ಮಾತಿನ ಮೋಡಿಗಾರ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರು, ಮಾಜಿ ಶಾಕರೂ ಆದ ಕುಂಬ್ಳೆ ಸುಂದರ ರಾವ್‌ ಅವರು ಇಂದು (ನ.30) ಬೆಳಗ್ಗೆ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.


ಶ್ರೀ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಕಲಾವಿದರಾಗಿದ್ದ ಅವರು ತಾಳಮದ್ದಳೆ ಕೂಟಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ದಿವಂಗತ ಶೇಣಿ ಗೋಪಾಲಕೃಷ್ಣ ಭಟ್‌ ಮತ್ತು ಕುಂಬ್ಳೆ ಸುಂದರ ರಾವ್ ಅವರ ಜೋಡಿ ಇದ್ದರಂತೂ ಯಕ್ಷಗಾನ, ತಾಳಮದ್ದಳೆ ಕಳೆ ಕಟ್ಟುತ್ತಿದ್ದ ರೀತಿಯೇ ಬೇರೆ ಇತ್ತು.


ಹಲವು ಸನ್ಮಾನ, ಪ್ರಶಸ್ತಿಗಳು ಕುಂಬ್ಳೆ ಸುಂದರ ರಾವ್ ಅವರಿಗೆ ಸಂದಿವೆ. ಹಿಂದಿನ ಸುರತ್ಕಲ್‌ ವಿಧಾನಸಭಾ ಕ್ಷೇತ್ರದಿಂದ ಅವರು ಭಾರತೀಯ ಜನತಾ ಪಕ್ಷದ ಶಾಸಕರಾಗಿ ಒಂದು ಅವಧಿಗೆ ಆಯ್ಕೆಯಾಗಿದ್ದರು. ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.


ಶ್ರೀ ಕುಂಬ್ಳೆ ಸುಂದರ ರಾಯರ ನಿಧನಕ್ಕೆ ಸಂತಾಪ ಸಂದೇಶ

ಕಲಾಕ್ಷೇತ್ರದ ಅಮೂಲ್ಯ ಕೊಂಡಿ ಕಳಚಿದೆ - 

ಅದ್ಭುತ ವಾಗ್ಮಿಗಳೂ, ಯಕ್ಷಗಾನ ಅರ್ಥಧಾರಿ, ಪಾತ್ರಧಾರಿಗಳಾಗಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದ ಕುಂಬ್ಳೆ ಸುಂದರ ರಾಯರ ನಿಧನದ ವಾರ್ತೆ ತಿಳಿದು ತೀರಾ ವಿಷಾದವಾಗಿದೆ. ರಾಮಾಯಣ ಮಹಾಭಾರತ ಪುರಾಣಗಳ ಬಗ್ಗೆ ಅಧ್ಯಯನಾತ್ಮಕ ವಿದ್ವತ್ತನ್ನು ಸಂಪಾದಿಸಿದ್ದ ಅವರು ಅದನ್ನು ಕಲೆಯ ಮೂಲಕ ಜನರಿಗೆ ತಲುಪಿಸಿದ್ದರು .ಇಂದು ಕಲಾಕ್ಷೇತ್ರದ ಅಮೂಲ್ಯ ಕೊಂಡಿಯೊಂದು ಕಳಚಿದಂತಾಗಿದೆ. ಶ್ರೀಮಠ  ದೊಂದಿಗೆ ವಿಶೇಷ ಬಾಂಧವ್ಯ ಒಡನಾಟ ಹೊಂದಿದ್ದರು. ‌ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಹಲವಾರು ಬಾರಿ ತಮ್ಮ ಕಲಾಪ್ರದರ್ಶನ ನೀಡಿದ್ದರು.‌ ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

-ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಜೇಜಾವರ ಮಠ, ಉಡುಪಿ

**********

ಯಕ್ಷಗಾನ ಕಂಡ ಅದ್ವಿತೀಯ ಕಲಾವಿದ, ಮೋಹಕ ಮಾತುಗಾರ- ಮಾಜಿ ಶಾಸಕ ಕುಂಬಳೆ ಸುಂದರ ರಾವ್ ಅವರ ನಿಧನದಿಂದ ತುಂಬಾ ನೋವಾಗಿದೆ. ಯಕ್ಷಾಂಗಣವು ಸುಂದರ ಅರ್ಥ ಸರಣಿ ಎಂಬ ಅವರ ಇಡೀ ವಾರದ ಕಾರ್ಯಕ್ರಮವನ್ನು ಆಯೋಜಿಸಿ, ಗೌರವ ಪ್ರಶಸ್ತಿ ನೀಡಿತ್ತು. ಇದೀಗ ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ.

- ಭಾಸ್ಕರ ರೈ ಕುಕ್ಕುವಳ್ಳಿ

ಕಾರ್ಯಾಧ್ಯಕ್ಷ, ಯಕ್ಷಾಂಗಣ ಮಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post