ಮಂಗಳೂರು: ಮಹಾನಗರ ಪಾಲಿಕೆಯ ಪದವು ಪೂರ್ವ ವಾರ್ಡಿನ ಕುಲಶೇಖರ ಬೈತುರ್ಲಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಬೈತುರ್ಲಿಯಲ್ಲಿ ಚರಂಡಿ ನಿರ್ಮಾಣಕ್ಕಾಗಿ ಸ್ಥಳೀಯರ ಬೇಡಿಕೆಯಿತ್ತು. ಹಾಗಾಗಿ ಮುಚ್ಚಿದ ಚರಂಡಿ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ವಿಶೇಷವಾಗಿ ಯೋಜನೆ ರೂಪಿಸಲಾಗಿದೆ ಎಂದರು.
ನಗರದ ಎಲ್ಲಾ ವಾರ್ಡುಗಳನ್ನು ಸಮನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ತೀರಾ ಹಿಂದುಳಿದ ವಾರ್ಡುಗಳ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮ ದೃಷ್ಟಿಯಿಂದ ಯೋಜನೆಗಳನ್ನು ತರಲು ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಶಕಿಲಾ ಕಾವಾ, ಸ್ಥಳೀಯ ಕಾರ್ಪೋರೇಟರ್ ಭಾಸ್ಕರ್ ಮೈೂಯ್ಲಿ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ಅಜಯ್ ಕುಲಶೇಖರ, ರಾಧಾಕೃಷ್ಣ ಭಟ್, ಜಯಾನಂದ, ಸತೀಶ್ ಬೈತುರ್ಲಿ, ಮಂಜುಳಾ ರಾವ್, ಅನಿಲ್ ರಾವ್, ಉದಯ್ ಚೌಕಿ, ಪ್ರಮೀಳಾ, ಸುಶಾಂತ್ ಕೋಟಿಮುರ, ದಿನೇಶ್, ಯೋಗಿಶ್ ಚೌಕಿ, ಅಕ್ಷಯ್, ಯೋಗೀಶ್ ಬೈತುರ್ಲಿ, ಅರುಣ್ ರಾವ್, ರಾಜೇಂದ್ರ, ಅಶ್ವಿತ್ ಕೊಟ್ಟಾರಿ, ಲಕ್ಷ್ಮಣ್, ದಿನೇಶ್ ಕೋಟಿಮುರ, ಹರಿಣಿ ಪ್ರೇಮ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment