ಪುತ್ತೂರು : ನವ ವಿವಾಹಿತೆ ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಸಾಂತ್ಯ ಎಂಬಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.
ಸಾಂತ್ಯ ನಿವಾಸಿ ಜಯಪ್ರಕಾಶ್ ಎಂಬವರ ಪತ್ನಿ ವೈಶಾಲಿ (26) ಆತ್ಮಹತ್ಯೆ ಮಾಡಿಕೊಂಡವರು.
ಜಯಪ್ರಕಾಶ್ ಹಾಗೂ ವೈಶಾಲಿ ಮದುವೆ 7 ತಿಂಗಳ ಹಿಂದೆ ನಡೆದಿದ್ದು, ಶನಿವಾರ ಸಂಜೆ ವೈಶಾಲಿ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ತಾಯಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Post a Comment