ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹವ್ಯಕ ಸಭಾ ಮುಳ್ಳೇರಿಯ ಮಂಡಲ ಸಭೆ ಸಂಪನ್ನ

ಹವ್ಯಕ ಸಭಾ ಮುಳ್ಳೇರಿಯ ಮಂಡಲ ಸಭೆ ಸಂಪನ್ನ


ಬದಿಯಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯಾ ಮಂಡಲ ಸಭೆಯು ಇತ್ತೀಚೆಗೆ ಪೆರಡಾಲ ವಲಯದ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಜರಗಿತು.


ಶ್ರೀಮತಿ ಕುಸುಮಾ ಸರ್ಮುಖ ದೀಪ ಬೆಳಗಿಸಿ ಪೆರಡಾಲ ವಲಯದ ಅಧ್ಯಕ್ಷರಾದ ಶ್ರೀ ಪದ್ಮರಾಜ ಪಟ್ಟಾಜೆ ಧ್ವಜಾರೋಹಣಗೈದರು. ಶಂಖನಾದ, ಗುರುವಂದನೆ, ಗೋವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು.

ಮಂಡಲ ಕಾರ್ಯದರ್ಶಿಕೃಷ್ಣಮೂರ್ತಿ ಮಾಡಾವು ಸ್ವಾಗತಿಸಿ ವರದಿಯನ್ನು ಸಭೆಯ ಮುಂದಿಟ್ಟರು.  ಮಂಡಲ ಕೋಶಾಧ್ಯಕ್ಷರಾದ ಶ್ರೀ ಹರಿಪ್ರಸಾದ ಪೆರ್ಮುಖ ಇವರು ತಿಂಗಳ ಲೆಕ್ಕಪತ್ರ ಮಂಡಿಸಿದರು. ಲಕ್ಷ್ಮೀಲಕ್ಷಣದಲ್ಲಿ ವಂಶವೃಕ್ಷ ಸೇರಿಸುವ ಬಗ್ಗೆಯೂ ಹೇಳಿದರು.


ಇತ್ತೀಚೆಗೆ ನಿಧನರಾದ ಮುಳ್ಳೇರಿಯ ಮಂಡಲದ ನಿಕಟಪೂರ್ವ ಅಧ್ಯಕ್ಷರು,  ಹಿರಿಯ ಗುರಿಕ್ಕಾರರು ಮೂಲಮಠ ಸೇವಾ ಸಮಿತಿಯ ಪದಾಧಿಕಾರಿ, ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸಮಿತಿಯ ಪದಾಧಿಕಾರಿ ಆಗಿದ್ದ ಪ್ರೊ. ಶ್ರೀಕೃಷ್ಣ ಭಟ್ಟರ ಆಗಲುವಿಕೆಗೆ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಪ್ರಾರ್ಥಿಸಿ ಶ್ರೀರಾಮತಾರಕ ಮಂತ್ರ ಪಠಣ ಮಾಡಲಾಯಿತು.


ವಲಯಗಳ ಪದಾಧಿಕಾರಿಗಳು ವರದಿಯನ್ನು  ಮಂಡಿಸಿದರು. ದಿನಾಂಕ 06.11.2022ರಂದು ಕಾಸರಗೋಡು ಮತ್ತು ಪಳ್ಳತ್ತಡ ವಲಯದಲ್ಲಿ, 20,11.2022ರಂದು ಗುಂಪೇ ವಲಯೋತ್ಸವ ನಡೆಯುವ ಬಗ್ಗೆ ತಿಳಿಸಿ ಸರ್ವರನ್ನೂ ಆಮಂತ್ರಿಸಿದರು.


ಕಾರ್ಯಸೂಚಿಯ ಕಾರ್ಯಾನುಷ್ಠಾನದ ಬಗ್ಗೆ ವಿಭಾಗವಾರು ಪದಾಧಿಕಾರಿಗಳು ತಮ್ಮ ವರದಿಯನ್ನು ನೀಡಿದರು.

ವಿದ್ಯಾರ್ಥಿ ಮತ್ತು ಯುವ ವಿಭಾಗದ  ಸಹಯೋಗದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುವುದರೊಂದಿಗೆ ಮಂಡಲೋತ್ಸವವನ್ನು ನಡೆಸುವರೆಂದು ತೀರ್ಮಾನಿಸಲಾಯಿತು.


ದಿನಾಂಕ 29.10.2022 ರಂದು ಶ್ರೀಸಂಸ್ಥಾನದವರು ಪೂಚಕ್ಕಾಡು ವಿಷ್ಣು ಭಟ್ಟ ಇವರ ಮನೆಯಲ್ಲಿ ನಡೆಯುವ ದೀಪಾವಳೀ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿರುವ ಬಗ್ಗೆ ಸಭೆಗೆ ತಿಳಿಸಿ ಎಲ್ಲರಿಗೂ ಆಮಂತ್ರಣವನ್ನು ನೀಡಲಾಯಿತು.


ಶ್ರೀಮಠದ ನಿಷ್ಠಾವಂತ ಗುರಿಕ್ಕಾರರಾಗಿ ಕುಂಟಿಕಾನ ಮಠದ ಸೇವಾಸಮಿತಿ ಪದಾಧಿಕರಿಯಾಗಿ ಹಾಲು ಉತ್ಪಾದಕ ಸಂಘದ ಪದಾಧಿಕಾರಿಯಾಗಿ ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆಸಲ್ಲಿಸಿ ಸದ್ಯ ನಿವೃತ್ತರಾಗಿರುವ ಶ್ರೀ ರಾಮಭಟ್ಟ ಮೀಸೆಯಲು, ಮತ್ತು ಪೆರಡಾಲ ವಲಯದ ಕಾರ್ಯದರ್ಶಿಗಳಾಗಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪೆರಡಾಲ ಮತ್ತು ನೀರ್ಚಾಲು ವಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸಿಕೊಂಡು ಬರುತ್ತಿದ್ದ ಪ್ರಕೃತ ವಾಸಸ್ಥಾನ ಬದಲಾವಣೆಗೊಂಡಿರುವ ಶ್ರೀ ಶ್ರೀಕೃಷ್ಣ ಭಟ್ಟ ದಂಪತಿಗಳನ್ನು ಶಾಲು ಹೊದೆಸಿ ಫಲಸ್ಕರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಶ್ರೀ ಶ್ರೀಕೃಷ್ಣ ಭಟ್ಟರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಾಸದ ಮಾತೆಯರಾಗಿ ಗುರಿ ತಲುಪಿದ ಶ್ರೀಮತಿ ವಿಜಯಾ ಕಲ್ಲಕಟ್ಟ ಇವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

 

ಮಹಾಮಂಡಲ ಮುಷ್ಟಿಭಿಕ್ಷೆ ವಿಭಾಗ ಪ್ರಧಾನರಾದ ಶ್ರೀ ರಮೇಶ ಭಟ್ಟ ಸರವು ಉಪಸ್ಥಿತರಿದ್ದು ಮುಳ್ಳೇರಿಯ ಮಂಡಲದ ವಲಯಗಳಲ್ಲಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಮಂಡಲ ಸಭೆಯಲ್ಲಿ ಮಾದರಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.


ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಇವರು ಅಧ್ಯಕ್ಷಸ್ಥಾನವಹಿಸಿ ಸಮಗ್ರ ವಿಭಾಗಗಳ ಕಾರ್ಯಯೋಜನೆಗಳ ಮಾಹಿತಿಗಳನ್ನು ವಿಸ್ತರಿಸಿದರು. ಶ್ರೀರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವತರಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post