ಕುಂದಾಪುರ : ಕುಂದಾಪುರದ ಸ್ವಾತಿ ಮಕ್ಕಳ ಕ್ಲಿನಿಕ್ ಸ್ಥಾಪಕ, 'ಮಕ್ಕಳ ಡಾಕ್ಟರ್' ಎಂದೇ ಪರಿಚಿತರಾಗಿದ್ದ ಡಾ.ವೆಂಕಟರಾಜ್ (67) ರವಿವಾರ ರಾತ್ರಿ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉಪ್ಪುಂದ ಮೂಲದ ವೆಂಕಟರಾಜ್ ತಮ್ಮ ವಿದ್ಯಾಭ್ಯಾಸ ಉಪ್ಪುಂದ ಹಾಗೂ ಕುಂದಾಪುರದಲ್ಲಿ ಪೂರೈಸಿ ಮಣಿಪಾಲದಲ್ಲಿ ವೈದ್ಯಕೀಯ ಶಾಸ್ತ್ರ ಅಭ್ಯಾಸ ಮಾಡಿ ದ್ದರು.
ಕುಂದಾಪುರ ವೆಂಕಟರಮಣ ದೇವಸ್ಥಾನ ಬಳಿ ಕ್ಷಿನಿಕ್ ನಡೆಸುತ್ತಿದ್ದ ಇವರು, ಕಳೆದ ಒಂದು ತಿಂಗಳ ಹಿಂದೆ ಲಘುಹೃದಯಾತಕ್ಕೆ ಒಳಗಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ.
إرسال تعليق