ಪೆರ್ಲ: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯಾನುಗ್ರಹ-ಮಾರ್ಗದರ್ಶನದಿಂದ ಕಾರ್ಯನಿರ್ವಹಿಸುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಕಾರ್ತಿಕ ಶುಕ್ಲ ಪಾಡ್ಯ ದಿನಾಂಕ 26-10-2022, ಬುಧವಾರ ಸಾಯಂಕಾಲ ದೀಪಾವಳೀ ಗೋಪೂಜೆ ನಡೆಯಿತು.
ಸಾಯಂ. 5.30 ರಿಂದ ಗುರುವಂದನೆ, ಗೋಪಾಲಕೃಷ್ಣಪೂಜೆ, ಗೋಪೂಜೆ, ತುಳಸೀ ಪೂಜೆ, ಕಾರ್ತಿಕ ದೀಪೋತ್ಸವ ನಡೆಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಲೋಕ ಕ್ಷೇಮವನ್ನು ಪ್ರಾರ್ಥಿಸಿ ಗೋಪೂಜೆ ನೆರವೇರಿಸಿ ಗೋಗ್ರಾಸ ಸಮರ್ಪಿಸಿ ಒಂದು ಚೀಲ ಪಶು ಆಹಾರ ನೀಡಿದರು. ಭಗವನ್ನಾಮಸಂಕೀರ್ತನೆ ನಡೆಸಿದರು. ಪ್ರಸಾದ ವಿತರಣೆಯ ನಂತರ ಲಘು ಉಪಾಹಾರದ ವ್ಯವಸ್ಥೆ ಮಾಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment