ಚೆನ್ನೈ: ಅಶೋಕ್ ನಗರ ಪ್ರದೇಶದಲ್ಲಿ ಭೂಗತ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕಾಗಿ ಅಗೆದಿದ್ದ ಹೊಂಡಕ್ಕೆ ಬಿದ್ದು ಕಾರ್ಪೋರೇಷನ್ ಕಾರ್ಮಿಕ ಸಾವನ್ನಪ್ಪಿದ್ದಾರೆ.
ಆತ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದು, ಸುಮಾರು ಆರು ಗಂಟೆಗಳ ನಂತರ ಮೃತದೇಹ ಪತ್ತೆಯಾಗಿದೆ.
ಮೃತ ಈರೋಡ್ ಮೂಲದ ಶಕ್ತಿವೇಲ್ ಎಂದು ಗುರುತಿಸಲಾಗಿದ್ದು ಅಶೋಕ್ ನಗರದಲ್ಲಿ ಘಟನೆ ನಡೆದಿದೆ.
ಹೊಂಡದಲ್ಲಿ ಕೆಸರು ಮಿಶ್ರಿತ ನೀರು ತುಂಬಿದ್ದು, ಶಕ್ತಿವೇಲ್ ತೆಗೆಯಲು ಯತ್ನಿಸುತ್ತಿದ್ದರು. ಕಾಮಗಾರಿ ನಡೆಸುತ್ತಿದ್ದ ವೇಳೆ ಕಾಲು ಕೆಳಗಿದ್ದ ಮಣ್ಣು ಸರಿದು 13 ಅಡಿ ಹೊಂಡಕ್ಕೆ ಬಿದ್ದಿದ್ದರಿಂದ ಸಮತೋಲನ ತಪ್ಪಿದೆ.
ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು. ಸುಮಾರು ಆರು ಗಂಟೆಗಳ ಕಾಲ ಕೆಸರು ತೆಗೆಯಲು ಹರಸಾಹಸಪಟ್ಟು ಶಕ್ತಿವೇಲ್ ಮೃತದೇಹವನ್ನು ಹೊರತೆಗೆಯಲಾಯಿತು.
Post a Comment