ಕಾಂತಾರ ಸಿನಿಮಾ ರಿಲೀಸ್ ಆಗಿ ಇದೀಗ 41 ದಿನಗಳೇ ಕಳೆದರೂ ಈಗಲೂ ಸೂಪರ್ ಸಕ್ಸಸ್ ಕಾಣುತ್ತಿದೆ.. ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
ಹಾಗೆ ಹಿರಿಯ ಸಾಹಿತಿ ಬಿ. ಟಿ ಲಲಿತಾ ನಾಯಕ್ ಇತ್ತೀಚೆಗೆ ಸಿನಿಮಾವನ್ನು ವಿರೋಧಿಸಿದ್ದರು..
ತುಳುನಾಡಿನ ಭೂತಾರಾಧನೆ ಮೂಢನಂಬಿಕೆ, ಅವರ ಮೈಮೇಲೆ ದೇವರು ಬರುವುದು ಸುಳ್ಳು ಎಂದು ಕರೆದಿದ್ದರು. ಇದು ತುಳು ನಾಡಿನ ಭಾಗದ ಜನರ ಆಕ್ರೋಶ ಕ್ಕೆ ಕಾರಣವಾಗಿದೆ.. ದೈವಾರಾಧಕರು ಸಿಟ್ಟಿಗೆ ಕಾರಣವಾಗಿದೆ..
ಇದೀಗ ಇದೇ ಕಾರಣಕ್ಕಾಗಿ ಲಲಿತಾ ನಾಯಕ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಗೆ ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ಎಂಬವರು ದೂರು ನೀಡಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ ನಿಯಮದಡಿ ಪ್ರಕರಣ ದಾಖಲಿಸುವಂತೆ ಉಡುಪಿ ನಗರ ಠಾಣೆಗೆ ದೂರು ನೀಡಲಾಗಿದೆ.
Post a Comment