ಬೆಂಗಳೂರು: ರಕ್ತಚಂದನ ದಿಮ್ಮಿಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದ ಗ್ಯಾಂಗ್ ಅನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಿದ್ಧರಾಜು, ಪ್ರಜ್ವಲ, ಲೋಕೇಶ, ದೇವರಾಜ್, ಗೋವಿಂದ ಸ್ವಾಮಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಆರೋಪಿಗಳು, ಪೊಲೀಸರ ಕಣ್ತಪ್ಪಿಸಲು ರಕ್ತಚಂದನ ಮರದ ಮೇಲೆ ಟೊಮ್ಯಾಟೊ ಬಾಕ್ಸ್ ಹಾಕಿ ಬೊಲೇರೋ ವಾಹನದಲ್ಲಿ ಸಾಗಿಸುತ್ತಿದ್ದರು.
ಮಂಡ್ಯದ ದೇವಲಾಪುರ ಕಾಡಿನಿಂದ ರಕ್ತಚಂದನ ಮರಗಳನ್ನ ಕಳ್ಳತನ ಮಾಡಿ ತಮಿಳುನಾಡು ಭಾಗಕ್ಕೆ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಇನ್ನೂ ಬಂಧಿತರಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ 1.5 ಟನ್ ರಕ್ತಚಂದನ ದಿಮ್ಮಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Post a Comment