ಸುಬ್ರಹ್ಮಣ್ಯ: ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್ ಎಂಬವರ ಪತ್ನಿ ಭಾರತಿ ಮೂಕಮಲೆ (33) ಅವರು ಅಕ್ಟೋಬರ್ 29ರಂದು ಕಾಣೆಯಾಗಿದ್ದಾರೆ.
ಈ ಬಗ್ಗೆ ಭಾರತಿ ಅವರ ಪತಿ ದೂರು ನೀಡಿದ್ದಾರೆ.
ಅಕ್ಟೋಬರ್ 29 ರಂದು ಸಂಜೆ ಮನೆಗೆ ಬಂದಾಗ ಭಾರತಿ ಮನೆಯಲ್ಲಿ ಇರಲಿಲ್ಲ, ಮಕ್ಕಳಲ್ಲಿ ವಿಚಾರಿಸಿದಾಗ ಅವರು ಎಲ್ಲಿಯೋ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು ಎಂದು ತಿಳಿಸಿದ್ದು, ಬಳಿಕ ಪತ್ನಿಗೆ ಕರೆ ಮಾಡಿದಾಗ ಫೋನ್ ಸ್ವೀಚ್ ಆಫ್ ಆಗಿತ್ತು, ಈ ಬಗ್ಗೆ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಿದಾಗ ಎಲ್ಲಿಯೂ ಸಿಗಲಿಲ್ಲ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
إرسال تعليق