ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್

ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್

 


ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.

ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಇಲಾಖೆ ಹೊಂದಿದ್ದ ಟ್ವಿಟರ್ ಖಾತೆಯನ್ನು ಎರಡು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿದೆ. ಅಸಂಬದ್ಧವಾಗಿ ಸರಣಿ ಟ್ವೀಟ್ ಮಾಡಲಾಗುತ್ತಿದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.


ಸದ್ಯ ಖಾತೆ ಹ್ಯಾಕ್ ಆಗಿರುವುದನ್ನು ಗಮನಿಸಿರುವ ಇಲಾಖೆಯ ಡಿಜಿಟಲ್ ಕಮ್ಯುನಿಕೇಷನ್ ತಂಡ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಈ ಹಿಂದೆ ಕೂಡ ಸೈಬರ್ ವಂಚಕರು ಜಯನಗರ ಸಂಚಾರಿ ಪೊಲೀಸ್, ವಿವೇಕನಗರ ಪೊಲೀಸ್ ಠಾಣೆ ಸೇರಿದಂತೆ ಅನೇಕ ಅಧಿಕೃತ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದರು.

ಅಷ್ಟು ಮಾತ್ರವಲ್ಲದೆ ಅಸಂಬದ್ಧ ಟ್ವೀಟ್ ಮಾಡಿರುವ ಪ್ರಕರಣಗಳು ವರದಿಯಾಗಿದ್ದವು.


0 تعليقات

إرسال تعليق

Post a Comment (0)

أحدث أقدم