ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿದ್ದೆಯೆಂಬ ವರ; ನಿದ್ದೆಯಿರದಿರೆ ಹರೋಹರ...!

ನಿದ್ದೆಯೆಂಬ ವರ; ನಿದ್ದೆಯಿರದಿರೆ ಹರೋಹರ...!


ನಿದ್ದೆ ಒಂದು ಅದ್ಭುತ. ಶರೀರಕ್ಕೆ ನಿದ್ದೆಯಿಂದ ವಿಶ್ರಾಂತಿ ದೊರೆಯುತ್ತದೆ. ಹಲವರಿಗೆ ನಿದ್ದೆ ಬರದಿರುವುದು ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಗಾದೆ ಮಾತು ನಿಜ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಿದ್ದೆಯು ಸಹಕಾರಿ. ಆರಾಮವಾಗಿ ನಿದ್ದೆ ಮಾಡುವ ಸಂದರ್ಭದಲ್ಲಿ ಯಾರಾದರೂ ಎಬ್ಬಿಸಿದರೆ ಸಾಕು ಕೆಟ್ಟ ಕೋಪ ಬರುವುದು. ನಿದ್ದೆ ಬರದಿದ್ದರೆ ಋಣಾತ್ಮಕ ಚಿಂತನೆ ಮಾಡುವುದನ್ನು ಸಹ ನೋಡುತ್ತೇವೆ. ಪ್ರತಿದಿನ ಏಳು ಗಂಟೆ ನಿದ್ದೆ ಮಾಡುವುದು ಕ್ರಮ. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ನಿದ್ದೆ ಮಾಡಿದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದು.


ತರುಣ-ತರುಣಿಯರು ಕನಸನ್ನು ಕಾಣುವುದನ್ನು ನೋಡುತ್ತೇವೆ. ಕನಸಿನಲ್ಲಿ ಕೆಟ್ಟ ಕನಸು ಬಿದ್ದು ಬೆಚ್ಚಿಬಿದ್ದು ಬೊಬ್ಬೆ ಹಾಕುವುದು ಸಹಜ. ಜೀವನದಲ್ಲಿ ಎಲ್ಲಾ ಕಷ್ಟಗಳನ್ನು ಎದುರಿಸಿ ಜೀವನವೇ ಇರುವ ರೋಸಿ ಹೋದವರಿಗೆ ಒಂದು ಒಳ್ಳೆಯ ನಿದ್ದೆ ಅವರ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯ. ಕೆಲವರು ರಾತ್ರಿ ಹೊತ್ತಿನಲ್ಲಿ ಸುಮಾರು ಗಂಟೆಗಳ ಕಾಲಗಳ ಮೊಬೈಲನ್ನು ಉಪಯೋಗಿಸಿಕೊಂಡು ಇರುತ್ತಾರೆ. ಬೆಳಗ್ಗೆ ಲೇಟಾಗಿ ಎದ್ದು ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ರಾತ್ರಿಯಲ್ಲಿ ಹಾಳಾದ ನಿದ್ದೆಯು ಕೆಲಸ ಮಾಡುವ ಸಂದರ್ಭದಲ್ಲಿ ಪರಿಣಾಮ ಬೀರುತ್ತದೆ. ಕಣ್ಣು ಕೆಂಪಾಗಿ ವಿಪರೀತ ತಲೆನೋವು ಕಾಣಿಸಿಕೊಳ್ಳುತ್ತದೆ. ನಿದ್ದೆ ಹಾಳು ಮಾಡಿಕೊಂಡರೆ ಪರಿಣಾಮವೇನೆಂಬುದು ಗೊತ್ತಿದ್ದರೂ ಅನವಶ್ಯಕವಾಗಿ ನಿದ್ದೆಯನ್ನು ಕೆಡಿಸಿಕೊಳ್ಳುತ್ತಾರೆ. ತಮ್ಮ ಕೈಯಿಂದಲೇ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ.


ನಿದ್ದೆ ಇಲ್ಲದವನಿಗೆ ಶರೀರದಲ್ಲಿ ಶಕ್ತಿ ಕಡಿಮೆಯಾಗುವುದರ ಜೊತೆಗೆ ಅವರ ತೂಕವು ಕಡಿಮೆಯಾಗುತ್ತದೆ. ನಿದ್ದೆಯು ಬಹುಮುಖ್ಯವಾದ ಪ್ರಕ್ರಿಯೆ. ಅದನ್ನು ಹಾಳು ಮಾಡಿಕೊಳ್ಳಬೇಡಿ.ಹೆಚ್ಚಾಗಿ ಅಥವಾ ಕಡಿಮೆ ನಿದ್ದೆ ಮಾಡಬೇಡಿ ಏಳು ಘಂಟೆಗಷ್ಟೇ ಮಾಡುವುದು ಆರೋಗ್ಯಕ್ಕೆ ಉತ್ತಮ. ನಮ್ಮ ಸುಖಕರ ಜೀವನನ್ನು ನಾವೇ ಅನುಸರಿಸಿಕೊಂಡು ಹೋಗಬೇಕು. ಗಾಢ ನಿದ್ದೆಯಲ್ಲಿರುವ ಎಬ್ಬಿಸುವುದು ಅಥವಾ ಅವನಿಗೆ ವಿಪರೀತ ಕಿರಿಕಿರಿ ಮಾಡುವುದು ತಪ್ಪು. ನಿದ್ದೆಯು ಚಿಂತೆಯನ್ನು ದೂರ ಮಾಡಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.


-ಕೃತಿ ಬಲ್ಯಾಯ

ತೃತೀಯ ಪ್ರತಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

0 Comments

Post a Comment

Post a Comment (0)

Previous Post Next Post