ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾತೃ ವಾತ್ಸಲ್ಯ ಹೃದಯದ ಪ್ರೊ.ಇಂದಿರಾ ಕಿದಿಯೂರು ಇನ್ನಿಲ್ಲ

ಮಾತೃ ವಾತ್ಸಲ್ಯ ಹೃದಯದ ಪ್ರೊ.ಇಂದಿರಾ ಕಿದಿಯೂರು ಇನ್ನಿಲ್ಲ




ಉಡುಪಿ: ಬಹು ವಿಷಯ ತಜ್ಞೆ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರು ಹಾಗೂ ಸುಮಾರು ಮೂರು ದಶಕಗಳ ಹೆಚ್ಚಿನ ಅಧ್ಯಾಪನ ಅನುಭವ ಹೊಂದಿರುವ ಪ್ರೊ.ಶ್ರೀಮತಿ ಇಂದಿರಾ ಕಿದಿಯೂರು (84)ರವರು ಇಂದು (ಅ.9) ನಿಧನರಾದರು.


ಉಡುಪಿ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸ ವೃತ್ತಿ ಪ್ರಾರಂಭಿಸಿ ಹಲವು ವರುಷಗಳ ಕಾಲ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗುವ ಮೂಲಕ ವಿದ್ಯಾರ್ಥಿಗಳ ಪಾಲಿಗೆ ನಿಜವಾದ ಅರ್ಥದಲ್ಲಿ ಮಾತೃ ಹೃದಯದ ವಾತ್ಸಲ್ಯ ಮೂರ್ತಿಯಾಗಿದ್ದರು.


ಪ್ರೊ. ಇಂದಿರಾ ರವರ ಅಚ್ಚುಮೆಚ್ಚಿನ ವಿಷಯ ಅಥ೯ ಶಾಸ್ತ್ರಅನ್ನುವುದು ಅವರ ಮನದಾಳದ ಮಾತಾಗಿತ್ತು. ಮುಂಬಯಿ ವಿ.ವಿ.ಯಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡುವಾಗ ಶ್ರೇಷ್ಠ ಅರ್ಥಶಾಸ್ತ್ರ ತಜ್ಞ ಪ್ರೊ. ಬ್ರಹ್ಮಾನಂದ ತನ್ನ ಗುರುಗಳಾಗಿದ್ದರು ಅನ್ನುವ ಪ್ರೊ.ಮೇಡಂ ಅವರ ಪಾಠದ ವೈಖರಿಯಿಂದ ಪ್ರಭಾವಿತರಾಗಿದ್ದರು.


ಅನಂತರ ಉಪನ್ಯಾಸ ವೃತ್ತಿಯ ಕಾರ್ಯಭಾರದ ಹಿನ್ನೆಲೆಯಲ್ಲಿ ರಾಜ್ಯ ಶಾಸ್ತ್ರವನ್ನು ವಿಶೇಷವಾಗಿ ಅಧ್ಯಯನ ಮಾಡಿ ಎಂ.ಎ. ಪದವಿ ಗಳಿಸಿಕೊಂಡವರು. ಅವರ ಇನ್ನೊಂದು ವಿಶೇಷ ಪ್ರತಿಭೆಯಂದರೆ ಹಲವಾರು ವಿದ್ಯಾರ್ಥಿಗಳಿಗೆ ಅಕೌಂಟ್ನಿಸಿ ಸಂಖ್ಯಾಶಾಸ್ತ್ರ ವಿಷಯಗಳಲ್ಲಿ ಪಾಠ ಮಾಡಿದ ಪರಿಣಿತ ಪಡೆದ ವಿಷಯ ತಜ್ಞರು ಹೌದು.


ಶ್ರೀಮತಿ ಇಂದಿರಾ ರವರ ಪತಿರಾಯರು ಪ್ರೊ. ರಮೇಶ್ ಕಿದಿಯೂರು ಎಂ.ಜಿಎಂ. ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದವರು. ಇವರಿಗೆ ಓರ್ವ ಮಗಳು ಶ್ರೀಮತಿ ಜಯಶ್ರೀ, ಇಬ್ಬರು ಗಂಡು ಮಕ್ಕಳು ಸತೀಶ್ ಮತ್ತು ಪ್ರದೀಪ್. 


-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم