ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಂಗಾವತಿ: ಜೂನಿಯರ್‌ ಕಾಲೇಜು ಆವರಣದಲ್ಲಿ ಕೋಟಿ ಕಂಠ ಗಾಯನ

ಗಂಗಾವತಿ: ಜೂನಿಯರ್‌ ಕಾಲೇಜು ಆವರಣದಲ್ಲಿ ಕೋಟಿ ಕಂಠ ಗಾಯನ


ಗಂಗಾವತಿ: ಕರ್ನಾಟಕ ಸರ್ಕಾರದ ವತಿಯಿಂದ ಕನ್ನಡ ಸಂಸೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆದೇಶದಂತೆ ಕರ್ನಾಟಕ‌ ರಾಜ್ಯಾದ್ಯಂತ ಆಯೊಜಿಸಲಾದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಗಂಗಾವತಿ ನಗರದ ಸರ್ಕಾರಿ ಜೂನಿಯರ್ ಶಾಲೆಯ ಆವರಣದಲ್ಲಿ ಇಂದು (ಅ.28) ಕನ್ನಡ ನುಡಿಯ ಹಾಡುಗಳನ್ನು ಹಾಡುವ ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 


ಕಾರ್ಯಕ್ರಮವನ್ನು ಕ್ಷೇತ್ರದ ಜನಪ್ರಿಯ ಶಾಸಕ ಪರಣ್ಣ ಮುನವಳ್ಳಿ ಅವರು ಉದ್ಗಾಟಿಸಿ ಕನ್ನಡ ನಾಡು ನುಡಿ ಕುರಿತು ಮಾತನಾಡಿದರು.


ಈ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ನಗರದ ವಿವಿಧ ಶಾಲೆಯ ಮಕ್ಕಳು ಎಲ್ಲರೂ ಕನ್ನಡ ನೆಲ ಜಲದ ಒಳಿತಿಗೆ ಶ್ರಮಿಸೋಣ ಎಂದು ಶಪಥ ಮಾಡುವ ಮೂಲಕ ಕನ್ನಡ ನಾಡ ಗೀತೆ ಹಾಡಿ ಗೌರವ ಸೂಚಿಸಲಾಯಿತು.


ಈ ಸಂದರ್ಭದಲ್ಲಿ ತಹಶಿಲ್ದಾರ್ ನಾಗರಾಜ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಕರ್ನಾಟಕ ಕನ್ನಡ ಸಂಘಟನೆಯ ಪಂಪಣ್ಣ ನಾಯಕ, ಚೆನ್ನಬಸವ ಜೆಕೀನ್, ರಾಜೇಶ್ ರೆಡ್ಡಿ, ವಿರುಪಾಕ್ಷಪ್ಪ ನಾಯಕ, ರಾಮಣ್ಣ ಬಳ್ಳಾರಿ,ಸೈಯದ್ ಜಿಲಾನ್ ಪಾಷ್, ಮಾಜಿ ಸದಸ್ಯರಾದ ಮನೋಹರ ಗೌಡ, ಗ್ರಾಮೀಣ ಮಂಡಲ ಅಧ್ಯಕ್ಷರು ಚನ್ನಪ್ಪ ಮಳಗಿ ವಕೀಲರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮಹಾಲಿಂಗಪ್ಪ ಬನ್ನಿಕೊಪ್ಪ, ಮುಖಂಡರಾದ ಶ್ರವಣ ಕುಮಾರ್ ರಾಯ್ಕರ್,  ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

0 تعليقات

إرسال تعليق

Post a Comment (0)

أحدث أقدم